ಮುಂಬೈ: ಆಟವಾಡಲು ಬರುತ್ತಿದ್ದ ಬಾಲಕಿಗೆ, ಸಿಹಿ ತಿಂಡಿ ಕೊಟ್ಟು ನಿರಂತರವಾಗಿ 2 ತಿಂಗಳ ಕಾಲ ಅತ್ಯಾಚಾರ ಎಸಗಿದ ಘಟನೆ ಮುಂಬೈನಲ್ಲಿ ನಡೆದಿದೆ. ಅತ್ಯಾಚಾರ ಎಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಲಾಡ್ ಪೂರ್ವದಲ್ಲಿ 14 ವರ್ಷದ ಬಾಲಕಿ ಮೇಲೆ, ಅನಿಲ್ ಬುಕಾರಿ ಎಂಬಾತ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಹಳೆಯ ವಾಹನಗಳ ಮಾರಾಟ ಮಾಡುವ ಅನಿಲ್ ಬುಕಾರಿ ಹಾಗೂ ಬಾಲಕಿ, ಮಲಾಡ್ ಪೂರ್ವ ಪ್ರದೇಶದ ಕ್ರಾಂತಿನಗರದಲ್ಲಿ ವಾಸವಾಗಿದ್ದಾರೆ. ಬಾಲಕಿ ಮಕ್ಕಳೊಂದಿಗೆ ಆಟವಾಡುತ್ತಾ ಮನೆಯ ಸಮೀಪ ಬಂದ ಸಂದರ್ಭದಲ್ಲಿ ಅನಿಲ್ ಆಕೆಗೆ ಸಿಹಿ ತಿಂಡಿ ಕೊಡುವುದಾಗಿ ಮನೆಯೊಳಗೆ ಕರೆದುಕೊಂಡು ಹೋಗುತ್ತಿದ್ದ.
ಮನೆಯಲ್ಲಿ ಅತ್ಯಾಚಾರ ಎಸಗುತ್ತಿದ್ದ. ಹೀಗೆ ಮನೆಯೊಳಗೆ ಕರೆದೊಯ್ದು ಮಗಳ ಮೇಲೆ ಅತ್ಯಾಚಾರ ಎಸಗಿರುವ ವಿಷಯ ಬಾಲಕಿಯ ಪೋಷಕರಿಗೆ ಗೊತ್ತಾಗಿ, ಅನಿಲ್ ನನ್ನು ಹಿಗ್ಗಾಮುಗ್ಗಾ ಥಳಿಸಿ, ಕುರಾರ್ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.