ಒಂದು ಕಾಲದಲ್ಲಿ ಮೊಬೈಲ್ ಮಾರುಕಟ್ಟೆಯಲ್ಲಿ ಅಧಿಪತ್ಯ ಸ್ಥಾಪಿಸಿ ನಂಬರ್ 1 ಸ್ಥಾನದಲ್ಲಿದ್ದ ನೋಕಿಯಾ, ಸ್ಯಾಮ್ಸಂಗ್ ಸ್ಮಾರ್ಟ್ ಫೋನ್ ಗಳ ಅಬ್ಬರದ ಮುಂದೆ ಕಣ್ಮರೆಯಾಗಿತ್ತು. ವಿಂಡೋಸ್ ಓ.ಎಸ್. ಮೂಲಕ ಮತ್ತೇ ಮಾರುಕಟ್ಟೆಗೆ ಬರುವ ಪ್ರಯತ್ನ ನಡೆದಿತ್ತಾದರೂ ಅದು ಯಶಸ್ವಿಯಾಗಲಿಲ್ಲ.
1998 ರಿಂದ 2011 ರವರೆಗೆ ಮಾರುಕಟ್ಟೆಯಲ್ಲಿದ್ದ ನೋಕಿಯಾ ಫೋನ್ ಗಳ ಬಳಕೆ, ಉತ್ಪಾದನೆ ಸ್ಥಗಿತಗೊಂಡಿದ್ದ ಕಾರಣ ಈ ಫೋನ್ ಗಳ ಜಾಗವನ್ನು ಸ್ಯಾಮ್ಸಂಗ್ ಸೇರಿದಂತೆ ಹಲವು ಕಂಪನಿಗಳು ಆಕ್ರಮಿಸಿಕೊಂಡವು.
ಇದೀಗ ನೋಕಿಯಾ ಮತ್ತೇ ಮೊಬೈಲ್ ಹಾಗೂ ಟ್ಯಾಬ್ಲೆಟ್ ಗಳ ತಯಾರಿಕೆಗೆ ಮುಂದಾಗಿದೆ. ನೋಕಿಯಾದ ಈ ಸ್ಮಾರ್ಟ್ ಫೋನ್ ಗಳಲ್ಲಿ ಅಂಡ್ರಾಯ್ಡ್ ಓ.ಎಸ್. ಬಳಸಿಕೊಳ್ಳಲಾಗುವುದೆಂದು ಹೇಳಲಾಗಿದೆ. ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿದ್ದ ನೋಕಿಯಾ ಫೋನ್ ಗಳು ಮಾರುಕಟ್ಟೆಯಲ್ಲಿ ಮತ್ತೇ ಅಧಿಪತ್ಯ ಸ್ಥಾಪಿಸುತ್ತದಾ ಎಂಬುದನ್ನು ಕಾದು ನೋಡಬೇಕಿದೆ.