ರಾಮ್ ಗಢ: ಸಹೋದರತೆಯ ಸಂದೇಶ ಸಾರುವ ರಕ್ಷಾಬಂಧನ ದಿನದಂದು, ರಾಖಿ ಕಟ್ಟುವ ಸಹೋದರಿಯರಿಗೆ ಅಣ್ಣ, ತಮ್ಮಂದಿರು ಉಡುಗೊರೆ ಕೊಡುವುದು ಸಾಮಾನ್ಯ. ಹಣ, ಗಿಫ್ಟ್ ಬದಲಿಗೆ ಇಲ್ಲೊಬ್ಬ ಅಣ್ಣ, ವಿಶೇಷವಾದುದನ್ನು ಉಡುಗೊರೆಯಾಗಿ ಕೊಟ್ಟಿದ್ದಾನೆ.
ಅಣ್ಣ, ತಮ್ಮಂದಿರಿಗೆ ರಾಖಿ ಕಟ್ಟುವ ಹೆಣ್ಣು ಮಕ್ಕಳು, ಉಡುಗೊರೆಯನ್ನು ನಿರೀಕ್ಷಿಸುತ್ತಾರೆ. ಅದೇ ರೀತಿ ಸಹೋದರರು ಕೂಡ ಉಡುಗೊರೆ ಕೊಡುತ್ತಾರೆ. ಜಾರ್ಖಂಡ್ ನ ವ್ಯಕ್ತಿಯೊಬ್ಬ ತನ್ನ ಸಹೋದರಿಗೆ ಶೌಚಾಲಯ ಕಟ್ಟಿಸಿಕೊಡುವ ಮೂಲಕ ರಕ್ಷಾಬಂಧನಕ್ಕೆ ವಿಶೇಷ ಗಿಫ್ಟ್ ಕೊಟ್ಟಿದ್ದಾನೆ. ಸ್ವಚ್ಛ ಭಾರತ ಯೋಜನೆಯ ಬಗ್ಗೆ ಆಸಕ್ತಿ ಹೊಂದಿರುವ ಮಗಢ ನಿವಾಸಿ ಪಿಂಟು ಎಂಬಾತ ತನ್ನ ಸಹೋದರಿಗೆ ಶೌಚಾಲಯ ನಿರ್ಮಿಸಿಕೊಟ್ಟು ಮಾದರಿಯಾಗಿದ್ದಾನೆ.
ಈ ಪ್ರದೇಶದ ಬಹುತೇಕರು ಶೌಚಕ್ಕೆ ಬಯಲಿಗೆ ಹೋಗುವ ಪರಿಸ್ಥಿತಿ ಇದೆ. ಇದನ್ನು ತಪ್ಪಿಸಿ ಎಲ್ಲರೂ ಶೌಚಾಲಯ ಹೊಂದಬೇಕೆಂಬ ಆಶಯದಿಂದ ರಾಖಿ ಹಬ್ಬಕ್ಕೆ ತಂಗಿಗೆ ಶೌಚಾಲಯ ಕಟ್ಟಿಸಿಕೊಟ್ಟಿದ್ದೇನೆ. ಇದರಿಂದ ಬೇರೆಯವರಿಗೂ ಪ್ರೇರಣೆಯಾಗಲಿ ಎಂದು ಪಿಂಟು ಹೇಳಿದ್ದಾನೆ.