ಪುಣೆಯ ಬ್ಯಾಂಕ್ ಉದ್ಯೋಗಿಯೊಬ್ಬರ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋದಲ್ಲಿ ಮಹಿಳೆ ಬ್ಯಾಂಕ್ ಕೆಲಸ ಮಾಡ್ತಿದ್ದಾಳೆ. ನೆಲದ ಮೇಲೆ ಮಗ ಮಲಗಿದ್ದಾನೆ. ಮಹಿಳೆಯ ಈ ಫೋಟೋ ಮೂಲಕ ಸಚಿವರು ಹಾಗೂ ರಾಜಕೀಯ ನಾಯಕರಿಗೆ ಸಂದೇಶ ರವಾನೆ ಮಾಡಿದ್ದಾಳೆ.
ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ ಸ್ವಾತಿ ಆಗಸ್ಟ್ 16ರಂದು ಫೇಸ್ಬುಕ್ ನಲ್ಲಿ ಈ ಫೋಟೋ ಅಪ್ ಲೋಡ್ ಮಾಡಿದ್ದಾಳೆ. ನನ್ನ ಮಗನ ಆರೋಗ್ಯ ಹದಗೆಟ್ಟಿದೆ. ಆತ ಬೇರೆಯವರ ಜೊತೆ ಇರುವುದಿಲ್ಲ. ಅರ್ಧ ದಿನ ಮುಗಿದಿದೆ. ನಾನು ರಜಾ ತೆಗೆದುಕೊಳ್ಳುವ ಹಾಗೂ ಇಲ್ಲ. ಸಾಲಕ್ಕೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ಬಾಕಿ ಇದೆ. ಎರಡೂ ಕರ್ತವ್ಯಗಳನ್ನು ಸರಿಯಾಗಿ ನಿಭಾಯಿಸಲು ಮನಸ್ಸನ್ನು ಸಿದ್ಧಪಡಿಸಿಕೊಂಡಿದ್ದೇನೆ. ಈ ಫೋಟೋ ಮೂಲಕ ಕಲಾಪದಲ್ಲಿ ನಿದ್ದೆ ಮಾಡುವ ರಾಜಕೀಯ ನಾಯಕರಿಗೆ ಸಂದೇಶ ರವಾನೆ ಮಾಡಲು ಬಯಸುತ್ತೇನೆ ಎಂದು ಮಹಿಳೆ ಬರೆದಿದ್ದಾಳೆ.
ಸಂಸತ್ ನಲ್ಲಿ ಗಲಾಟೆ ಮಾಡಿ ಇಲ್ಲವೇ ನಿದ್ದೆ ಮಾಡಿ ಕಲಾಪವನ್ನು ಹಾಳು ಮಾಡುವ ನಾಯಕರಿಗೆ ಸ್ವಾತಿ ಈ ಮೂಲಕ ಸಂದೇಶ ರವಾನೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ವೈರಲ್ ಆಗ್ತಿದ್ದಂತೆ ರಾಜಕಾರಣಿಗಳ ಬಗ್ಗೆ ಟೀಕೆ ವ್ಯಕ್ತವಾಗ್ತಾ ಇದೆ. ಸ್ವಾತಿಗೆ ರಜೆ ನೀಡುವಂತೆಯೂ ಕೆಲವರು ಕೇಳಿದ್ದಾರೆ. ಇದಕ್ಕೆ ಧನ್ಯವಾದ ತಿಳಿಸಿದ್ದಾಳೆ ಸ್ವಾತಿ.