ಈಜಿಪ್ಟ್ ಸರ್ಕಾರದ ಟಿವಿ ಚಾನೆಲ್ ಮಾಡಿರುವ ಯಡವಟ್ಟು ಇದು. ಮಹಿಳಾ ನಿರೂಪಕಿಯರು ತೂಕ ಕಳೆದುಕೊಂಡ ಮೇಲಷ್ಟೆ ಅವರಿಗೆ ಸುದ್ದಿ ವಾಚನಕ್ಕೆ ಅವಕಾಶ ನೀಡುವುದಾಗಿ ವಾಹಿನಿ ಸ್ಪಷ್ಟಪಡಿಸಿದೆ. ಈ ವಾಹಿನಿ ಸರ್ಕಾರದ ಪರವಾಗಿ ಕೆಲಸ ಮಾಡ್ತಾ ಇದ್ದು, ಖಾಸಗಿ ಚಾನಲ್ ಗಳೊಂದಿಗೆ ಪೈಪೋಟಿ ನಡೆಸಲು ವಿಫಲವಾಗಿದೆ. ಟಿಆರ್ ಪಿಗಾಗಿ ಕಸರತ್ತು ನಡೆಸ್ತಾ ಇರೋ ವಾಹಿನಿ ದಪ್ಪಗಿರುವ ಆ್ಯಂಕರ್ ಗಳ ಮೇಲೆ ಗಧಾಪ್ರಹಾರ ಮಾಡಿದೆ.
ಇದ್ರಿಂದಾಗಿ 6-8 ನಿರೂಪಕಿಯರು ಹಿಂಬಡ್ತಿ ಪಡೆದಿದ್ದಾರೆ ಅಂತಾ ಈಜಿಪ್ಟಿಯನ್ ರೇಡಿಯೋ ಹಾಗೂ ಟಿವಿ ಯೂನಿಯನ್ ಮುಖ್ಯಸ್ಥ ಸಫಾ ಹೆಗಜಿ ತಿಳಿಸಿದ್ದಾರೆ. ಇದೊಂದು ಅವಮಾನಕರ ಕ್ರಮ ಅಂತಾ ಮಹಿಳಾ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಇನ್ನು ಕೆಲವರು ಈ ಕ್ರಮವನ್ನು ಸ್ವಾಗತಿಸಿದ್ದು ತೆರೆಯ ಮೇಲೆ ನಿರೂಪಕಿಯರ ಅಪಿಯರೆನ್ಸ್ ತುಂಬಾ ಪ್ರಮುಖವಾದದ್ದು ಎಂದಿದ್ದಾರೆ.