ಕೇರಳ ರಾಜ್ಯ ಸರ್ಕಾರಿ ಸ್ವಾಮ್ಯದ ಗ್ರಾಹಕರ ಸಹಕಾರ ಸಂಘ ಓಣಂ ಹಬ್ಬದಲ್ಲಿ ಮದ್ಯವನ್ನು ಆನ್ ಲೈನ್ ನಲ್ಲಿ ಮಾರಾಟ ಮಾಡಲು ನಿರ್ಧರಿಸಿದೆ.
ಸಂಸ್ಥೆ ಅಧ್ಯಕ್ಷ ಎಮ್. ಮೆಹಬೂಬ್ ಅವರು, “ಓಣಂ ಹಬ್ಬದ ದಿನ ಗ್ರಾಹಕರು ಸರತಿ ಸಾಲಿನಲ್ಲಿ ನಿಂತು ಮದ್ಯವನ್ನು ಕೊಳ್ಳುವುದನ್ನು ತಪ್ಪಿಸಲು ಸಂಸ್ಥೆ, ಮದ್ಯವನ್ನು ಆನ್ ಲೈನ್ ಮಾರಾಟ ಮಾಡಲು ನಿರ್ಧರಿಸಿದೆ” ಎಂದಿದ್ದಾರೆ.
ಆನ್ ಲೈನ್ ನಲ್ಲಿ ಸುಮಾರು 59 ಬ್ರ್ಯಾಂಡ್ ಗಳ ಮಾರಾಟಕ್ಕೆ ಸರಕಾರದ ಅನುಮತಿ ಪಡೆದಿದ್ದೇವೆ ಎಂದು ಮೆಹಬೂಬ್ ತಿಳಿಸಿದ್ದಾರೆ.
ಕಡಿಮೆ ಬೆಲೆಗೆ ಒಳ್ಳೆಯ ಗುಣಮಟ್ಟದ ಮದ್ಯವನ್ನು ಗ್ರಾಹಕರಿಗೆ ತಲುಪಿಸುವುದು ನಮ್ಮ ಗುರಿ. ಇದರಿಂದ ಭ್ರಷ್ಟಾಚಾರ ಮತ್ತು ದುರಾಡಳಿತದಿಂದ ನಷ್ಟ ಹೊಂದುತ್ತಿದ್ದ ಸಂಸ್ಥೆ ಸಾರ್ವಜನಿಕ ವಲಯದಲ್ಲಿ ಲಾಭ ಹೊಂದುತ್ತಿದೆ ಎಂದು ಸಂಸ್ಥೆ ತಿಳಿಸಿದೆ.