ಜಾಮ್ ನಗರ್: ಗುಜರಾತ್ ನ ಜಾಮ್ ನಗರದ ಸಮೀಪದಲ್ಲಿರುವ ಸಾಸೋಯಿ ಡ್ಯಾಂನಲ್ಲಿ, ಅಪಾಯವನ್ನೂ ಲೆಕ್ಕಿಸದೇ ಹುಚ್ಚು ಸಾಹಸ ನಡೆಸುವ ಮೂಲಕ, ಯುವಕರು ಮೋಜು ಮಸ್ತಿ ಮಾಡಿದ್ದಾರೆ. ಈ ಅಪಾಯಕಾರಿ ಸನ್ನಿವೇಶಗಳಂತೂ ಮೈನವಿರೇಳಿಸುವಂತಿದೆ.
ತುಂಬಿ ಹರಿಯುತ್ತಿರುವ ಸಾಸೋಯಿ ಜಲಾಶಯದ ಮೇಲ್ಭಾಗದಲ್ಲಿ, ಸುಮಾರು 20 ಅಡಿ ಎತ್ತರದಿಂದ ಡೈವ್ ಹೊಡೆಯುವ ಯುವಕರು, ಅಪಾಯಕಾರಿ ಸಾಹಸ ಮಾಡುತ್ತಾರೆ. ಅಲ್ಲದೇ, ಡ್ಯಾಂನಿಂದ ಧುಮ್ಮಿಕ್ಕುವ ನೀರಿನಲ್ಲಿ ಯುವಕರು, ಯುವತಿಯರು ನೀರಿನಲ್ಲಿ ಹುಚ್ಚು ಸಾಹಸ ನಡೆಸುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡಿವೆ. ಇದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ ಡ್ಯಾಂ ಪ್ರದೇಶದಲ್ಲಿ ಭದ್ರತೆ ಕಲ್ಪಿಸಲಾಗಿದೆ.
ಸಾಸೋಯಿ ಡ್ಯಾಂನಲ್ಲಿ 20 ಅಡಿ ಎತ್ತರದ ಪ್ರದೇಶದಿಂದ ಧುಮ್ಮಿಕ್ಕುತ್ತಿರುವ ನೀರಿನಲ್ಲಿ ಯುವಕರು, ಯುವತಿಯರು ಅಪಾಯವನ್ನು ಲೆಕ್ಕಿಸದೇ, ನೀರಿನಲ್ಲಿ ಆಟವಾಡುವ ದೃಶ್ಯಗಳು ಆತಂಕ ಮೂಡಿಸುವಂತಿವೆ. ಈ ಹಿಂದೆ ಇಲ್ಲಿ ನಡೆದ ದುರಂತದಲ್ಲಿ 5-6 ಮಂದಿ ಸಾವು ಕಂಡಿದ್ದಾರೆ ಎನ್ನಲಾಗಿದೆ.