ಡೊಮಿನಿಕನ್ ರಿಪಬ್ಲಿಕ್ ನ ಸೆಲಿನಾಸ್ ಹಳ್ಳಿಯಲ್ಲಿ ಲಿಂಗ ಪರಿವರ್ತನೆ ಸೃಷ್ಟಿಯ ನಿಯಮವೇ ಆಗಿದೆ. ಇಲ್ಲಿ ಮಗು ಹುಟ್ಟಿದ ಕೂಡಲೇ ಅದು ಗಂಡು ಅಥವಾ ಹೆಣ್ಣು ಎಂದು ನಿಖರವಾಗಿ ಹೇಳಲಾಗುವುದಿಲ್ಲ. ಮಗುವಿಗೆ 12 ವರ್ಷವಾದ ಮೇಲೆಯೇ ಅದು ಗಂಡು ಅಥವಾ ಹೆಣ್ಣು ಎಂಬುದು ನಿರ್ಧಾರವಾಗುತ್ತದೆ.
ಸಾಮಾನ್ಯವಾಗಿ ಮಕ್ಕಳು ದೊಡ್ಡವರಾದಂತೆ ಹಾರ್ಮೋನ್ ವ್ಯತ್ಯಾಸವಾಗಿ ಶಾರೀರಿಕ ಬದಲಾವಣೆಗಳಾಗುತ್ತದೆ. ಆದರೆ ಸೆಲಿನಾಸ್ ಹಳ್ಳಿಯಲ್ಲಿ ಖಾಸಗಿ ಅಂಗಗಳೂ ಕೂಡ ಬದಲಾಗುತ್ತದೆ. ಹುಟ್ಟುವಾಗ ಹೆಣ್ಣಾಗಿರುವ ಶಿಶು ಬೆಳೆ ಬೆಳೆಯುತ್ತ ಹುಡುಗನಾದ ಉದಾಹರಣೆಗಳೂ ಇವೆ.
ಹುಟ್ಟಿದ ಶಿಶುವಿನ ಜನನಾಂಗ ಎಷ್ಟು ಚಿಕ್ಕದಾಗಿರುತ್ತದೆಂದರೆ ಅದು ಗಂಡು ಅಥವಾ ಹೆಣ್ಣು ಎಂದು ನಿರ್ಧರಿಸುವುದೇ ಕಷ್ಟವಾಗುತ್ತದೆ. ಹಾಗಾಗಿಯೇ ಈ ಊರಲ್ಲಿ ಮಕ್ಕಳಿಗೆ 12 ವರ್ಷವಾದ ಮೇಲೆ ಅವರಿಗೆ ಹೆಸರಿಡಲಾಗುತ್ತದೆ.