ರಾಜಸ್ಥಾನದ ಗೋ ಶಾಲೆಯಲ್ಲಿ ಹಸುಗಳು ಸಾವನ್ನಪ್ಪಿರುವ ಕುರಿತಂತೆ ಆಕ್ರೋಶಗೊಂಡಿರುವ ಬಿ.ಜೆ.ಪಿ. ಶಾಸಕ ಘನಶ್ಯಾಂ ತಿವಾರಿ ತಮ್ಮದೇ ಪಕ್ಷದ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದಾರೆ.
ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ಕಡು ಟೀಕಾಕಾರರೆಂದೇ ಪರಿಗಣಿಸಲ್ಪಟ್ಟಿರುವ ಘನಶ್ಯಾಂ ತಿವಾರಿ, ಪ್ರಸ್ತುತ ರಾಜ್ಯ ಸರ್ಕಾರದ ಅವಧಿಯಲ್ಲಿ ಗೋವುಗಳ ಕಳ್ಳ ಸಾಗಾಣಿಕೆ 7 ರಿಂದ 8 ಪಟ್ಟು ಹೆಚ್ಚಾಗಿದೆ ಎಂದು ಆರೋಪಿಸಿದ್ದಾರೆ.
ಗೋ ಶಾಲೆಯಲ್ಲಿ ಹಸುಗಳು ಸಾವನ್ನಪ್ಪಿರುವುದರ ಹಿಂದೆ, ಕೆಲವರು ಗೋ ಸಾಗಾಣಿಕೆದಾರರೊಂದಿಗೆ ಶಾಮೀಲಾಗಿರುವ ಶಂಕೆಯಿದೆ. ಹೀಗಾಗಿ ಪ್ರಕರಣವನ್ನು ಸಿಬಿಐ ಗೆ ವಹಿಸಬೇಕು ಅಥವಾ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದ್ದಾರೆ.