ಶಿವಮೊಗ್ಗ: ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕಾಗೋಡು ತಿಮ್ಮಪ್ಪ, ಭಾಷಣ ಮಾಡುವಾಗಲೇ ಅಸ್ವಸ್ಥರಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ನಗರದ ಡಿ.ಎ.ಆರ್. ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಧ್ವಜಾರೋಹಣ ನಂತರ ಅವರು, ಸುಮಾರು 15 ನಿಮಿಷ ಭಾಷಣ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ದಿಢೀರ್ ಅಸ್ವಸ್ಥರಾಗಿದ್ದು, ಕುಸಿದಿದ್ದಾರೆ. ಕೂಡಲೇ ಅವರನ್ನು ಅಲ್ಲಿದ್ದ ಅಧಿಕಾರಿಗಳು, ಬೆಂಬಲಿಗರು ಎತ್ತಿಕೊಂಡು ವಾಹನದವರೆಗೆ ಕರೆದೊಯ್ದು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ. 84 ವರ್ಷ ವಯಸ್ಸಿನ ಕಾಗೋಡು ತಿಮ್ಮಪ್ಪ ನಿರಂತರ ಪ್ರವಾಸದಿಂದ ಬಳಲಿದ್ದು, ಇಂದು ಭಾಷಣ ಮಾಡುವಾಗಲೇ ಅಸ್ವಸ್ಥರಾಗಿದ್ದಾರೆ ಎಂದು ಹೇಳಲಾಗಿದೆ.
ನಿರಂತರ ಪ್ರವಾಸದಿಂದ ಬಳಲಿದ್ದ ಅವರು, ಡಿ.ಎ.ಆರ್. ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡುವಾಗಲೇ ಅಸ್ವಸ್ಥರಾಗಿದ್ದು, ಪಕ್ಕದಲ್ಲೇ ನಿಂತಿದ್ದ ಅಧಿಕಾರಿಗಳು, ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗಿದೆ. ಅವರು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ.