ಪಟಿಯಾಲಾ ರಾಜಸಂಸ್ಥಾನದ ರಾಜ ಭೂಪಿಂದರ್ ಸಿಂಗ್ ತಮ್ಮ ವಿಶಿಷ್ಟ, ವೈಭವೋಪೇತ ಜೀವನ ಶೈಲಿಯಿಂದಲೇ ಜಗದ್ವಿಖ್ಯಾತನಾಗಿದ್ದರು. ಅವರ ಆಡಂಬರದ ಜೀವನ ಶೈಲಿ ಹೇಗಿತ್ತೆಂಬುದನ್ನು ನೀವೇ ನೋಡಿ….
ಮಹಾರಾಜ ಭೂಪಿಂದರ್ ಸಿಂಗ್ ಊಟ ಮಾಡುವ ತಟ್ಟೆ ಸುಮಾರು 17 ಕೋಟಿ ರೂ. ಬೆಲೆ ಬಾಳುತ್ತಿತ್ತು. ಅವರ ಈ ಊಟದ ತಟ್ಟೆಯನ್ನು ಲಂಡನ್ನಿನ ಗೋಲ್ಡ್ ಸ್ಮಿತ್ ಮತ್ತು ಸಿಲ್ವರ್ ಸ್ಮಿತ್ ಕಂಪನಿ ತಯಾರಿಸಿತ್ತು. ರಾಜ ಬಳಸುವ ಎಲ್ಲ ಪಾತ್ರೆಗಳೂ ಚಿನ್ನ ಅಥವಾ ಬೆಳ್ಳಿಯ ಲೇಪನದ್ದೇ ಆಗಿತ್ತು. ಈ ರಾಜನ ಬಳಿ ಸ್ವಂತ ವಿಮಾನ ಕೂಡ ಇತ್ತು. ವಿಮಾನ ಹೊಂದಿದ್ದ ಭಾರತದ ಮೊದಲ ವ್ಯಕ್ತಿ ಎಂಬ ಹೆಮ್ಮೆ ಇವರದ್ದಾಗಿತ್ತು.
ರಾಜಾ ಭೂಪಿಂದರ್ ಸಿಂಗ್ ಬಳಿ 2930 ವಜ್ರಗಳಿರುವ ನೆಕ್ಲೆಸ್ ಇತ್ತು. ಇದರಲ್ಲಿ ಜಗತ್ತಿನ ಏಳನೇ ಅತಿ ದೊಡ್ಡ ವಜ್ರ ಜೋಡಿಸಲಾಗಿತ್ತು. 1 ಸಾವಿರ ಕ್ಯಾರೆಟ್ ತೂಗುತ್ತಿದ್ದ ಈ ನೆಕ್ಲೆಸ್ ಬೆಲೆ 166 ಕೋಟಿಯಾಗಿತ್ತು. ಸ್ವಾತಂತ್ರ್ಯಾನಂತರದಲ್ಲಿ ಈ ನೆಕ್ಲೆಸ್ ನ ಕಳ್ಳತನವಾಯ್ತು.
ಈ ಪಟಿಯಾಲಾ ರಾಜನ ಬಳಿ 20 ರೋಲ್ಸ್ ರಾಯ್ಸ್ ಕಾರು ಸೇರಿದಂತೆ ಒಟ್ಟು 44 ಕಾರುಗಳಿದ್ದವು. ರಾಜ ಎಲ್ಲ ಕಾರುಗಳನ್ನೂ ತನ್ನಿಷ್ಟದಂತೆ ವಿನ್ಯಾಸಗೊಳಿಸಿಕೊಂಡಿದ್ದರು.