ಸೆಲ್ಫಿ ಪ್ರಿಯರಿಗೆ ಒಪ್ಪೊ ಕಂಪನಿ ಒಳ್ಳೆಯ ಉಡುಗೊರೆ ನೀಡಿದೆ. ಒಪ್ಪೊ ಮೊಬೈಲ್ ಕಂಪನಿಯ ಸೆಲ್ಫಿ ಎಕ್ಸ್ ಪರ್ಟ್ ‘ಒಪ್ಪೊ ಎಫ್1 ಎಸ್’ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ.
ಕಂಪನಿ ಆಗಸ್ಟ್ 4 ರಿಂದ 10ರವರೆಗೆ ಒಪ್ಪೊ ಎಫ್1 ಎಸ್ ಮೊಬೈಲಿನ ಉಚಿತ ಆರ್ಡರ್ ಗೆ ಅವಕಾಶ ಒದಗಿಸಿತ್ತು. ಬೇಡಿಕೆ ನೀಡಿದ ಎಲ್ಲ 50 ಗ್ರಾಹಕರಿಗೆ ಶನಿವಾರ ಒಪ್ಪೊ ಎಫ್1 ಎಸ್ ಮೊಬೈಲ್ ವಿತರಿಸಲಾಯಿತು. ಶನಿವಾರ ಬೆಂಗಳೂರಿನ ಜಯನಗರದ ಶೋರೂಂನಲ್ಲಿ ಬಾಲಿವುಡ್ ನಟಿ ಹುಮಾ ಖುರೇಷಿ ಮೊಬೈಲ್ ವಿತರಿಸಿದರು.
ಒಪ್ಪೊ ಎಫ್1 ಎಸ್ ಮೊಬೈಲ್ ದೆಹಲಿ, ಮುಂಬೈ, ಬೆಂಗಳೂರು, ಕೋಲ್ಕತ್ತಾ ಮುಂತಾದೆಡೆ ಲಭ್ಯವಿದೆ. ಈ ಫೋನಿನಲ್ಲಿ 3ಜಿಬಿಯ ರ್ಯಾಮ್, ಅಕ್ಟಾಕೋರ್ ಪ್ರೊಸೆಸರ್, 32 ಜಿಬಿಯ ರ್ಯಾಮ್, ಫಿಂಗರ್ ಪ್ರಿಂಟರ್ ರೀಡರ್, 16 ಎಂಪಿ ಸಾಮರ್ಥ್ಯದ ಫ್ರಂಟ್ ಕ್ಯಾಮರಾ, ಡ್ಯೂಯಲ್ ಸಿಮ್ ಮತ್ತು 128 ಜಿಬಿವರೆಗಿನ ಹೆಚ್ಚುವರಿ ಮೆಮೊರಿ ಸಾಮರ್ಥ್ಯ ಹೊಂದಿದೆ. ಮಾರುಕಟ್ಟೆಯಲ್ಲಿ ಇದರ ಬೆಲೆ 17,990 ರೂಪಾಯಿಗಳಾಗಿದೆ.