ಬಾಂಡ್ ಸಿನಿಮಾ ಅಂದ್ರೇನೆ ಪ್ರೇಕ್ಷಕರು ತುದಿಗಾಲಲ್ಲಿ ನಿಲ್ತಾರೆ. ಅದ್ರಲ್ಲೂ ಲೇಡಿ ಬಾಂಡ್ ಅಂದ್ರೆ ಇನ್ನೂ ಕುತೂಹಲ ಜಾಸ್ತಿಯಾಗೋದ್ರಲ್ಲಿ ಅನುಮಾನವೇ ಇಲ್ಲ.
ಎಲ್ಲವೂ ಓಕೆ ಆದ್ರೆ ಬಾಂಡ್ ಅವತಾರದಲ್ಲಿ ಪ್ರಿಯಾಂಕಾ ಚೋಪ್ರಾ ಮಿಂಚಬಹುದು. ಕ್ವಾಂಟಿಕೋ ಸೀಸನ್-1 ನಲ್ಲಿ ಅದ್ಭುತವಾಗಿ ನಟಿಸಿರೋ ಪ್ರಿಯಾಂಕಾ ವಿಶ್ವದಾದ್ಯಂತ ಸಿನಿಪ್ರಿಯರ ಬಾಯಲ್ಲಿ ನಲಿದಾಡಿದ್ದಾರೆ. ಪೀಪಲ್ಸ್ ಚಾಯ್ಸ್ ಪ್ರಶಸ್ತಿ ಕೂಡ ಅವರನ್ನು ಅರಸಿ ಬಂದಿದೆ.
ಸದ್ಯದಲ್ಲಿ ರಿಲೀಸ್ ಆಗಲಿರುವ ‘ದಿ ರಾಕ್’, ‘ಬೇವಾಚ್’ ಮತ್ತು ‘ಕ್ವಾಂಟಿಕೋ ಸೀಸನ್ 2’ ನ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಮೂಲಗಳ ಪ್ರಕಾರ ಪ್ರಿಯಾಂಕಾ ಮೊದಲ ಲೇಡಿ ಬಾಂಡ್ ಆಗಿ ನಟಿಸಲಿದ್ದಾರೆ.
007 ಸಿನಿಮಾದಲ್ಲಿ ಬಾಂಡ್ ಗರ್ಲ್ ಆಗಬೇಕೆಂಬುದು ಅವರ ಬಹುದಿನಗಳ ಆಸೆ. ಬಾಂಡ್ ಅವತಾರದಲ್ಲಿ ಮಿಂಚಬೇಕು ಜೊತೆಗೆ ಜೇನ್ ಅಂತಾ ಕರೆಸಿಕೊಳ್ಬೇಕು ಅನ್ನೋ ತಮ್ಮ ಬಯಕೆಯನ್ನು ಖುದ್ದು ಪ್ರಿಯಾಂಕಾ ಹೇಳಿಕೊಂಡಿದ್ದಾರೆ. ಆದಷ್ಟು ಬೇಗ ಅವರ ಆಸೆ ಈಡೇರಿದ್ರೆ, ಅಭಿಮಾನಿಗಳು ಕೂಡ ಲೇಡಿ ಬಾಂಡ್ ಅನ್ನು ಕಣ್ತುಂಬಿಕೊಳ್ಳಬಹುದು.