ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 2000 ಸಿಸಿ ಸಾಮರ್ಥ್ಯದ ಡಿಸೇಲ್ ವಾಹನಗಳ ಮೇಲೆ ಹೇರಿದ್ದ ನಿಷೇಧವನ್ನು ಸುಪ್ರೀಂ ಕೋರ್ಟ್ ಹಿಂಪಡೆದಿದೆಯಲ್ಲದೇ ಎಸ್.ಯು.ವಿ. ವಾಹನಗಳ ಮಾರಾಟಕ್ಕೆ ವಿಧಿಸಿದ್ದ ನಿರ್ಬಂಧವನ್ನು ಹಿಂಪಡೆದಿದೆ.
ಇಂದು ಈ ಕುರಿತು ಮಹತ್ವದ ತೀರ್ಪು ನೀಡಲಾಗಿದ್ದು, ಶೇ.1 ರಷ್ಟು ಗ್ರೀನ್ ಸೆಸ್ ಪಾವತಿಸಿ ಎಸ್.ಯು.ವಿ. ವಾಹನಗಳನ್ನು ಖರೀದಿಸಬಹುದೆಂದು ಹೇಳಲಾಗಿದೆ. ಇದರಿಂದಾಗಿ ಈ ವಾಹನಗಳ ಬೆಲೆಯಲ್ಲಿ ಹೆಚ್ಚಳವಾಗಬಹುದೆನ್ನಲಾಗಿದೆ.
ಸುಪ್ರೀಂ ಕೋರ್ಟ್, ದೆಹಲಿಯಲ್ಲಿ ಡಿಸೇಲ್ ವಾಹನಗಳ ಮೇಲೆ ನಿಷೇಧ ಹೇರಿದ್ದ ಪರಿಣಾಮ ಟಯೋಟಾ ಕಂಪನಿ ಬರೋಬ್ಬರಿ 1,700 ಕೋಟಿ ರೂ. ಗಳ ನಷ್ಟ ಅನುಭವಿಸಿತ್ತು. ಮರ್ಸಿಡೀಸ್ ಸಹ ನಷ್ಟ ಅನುಭವಿಸಿರುವ ಕಂಪನಿಗಳ ಪೈಕಿ ಒಂದಾಗಿದ್ದು, ನಿಷೇಧ ತೆರವಿನಿಂದಾಗಿ ವಾಹನಗಳ ಮಾರಾಟ ಮತ್ತೇ ಆರಂಭವಾಗಲಿದೆ.