ಸ್ಯಾಂಡಲ್ ವುಡ್ ನಲ್ಲೊಂದು ಅದ್ಧೂರಿ ನಿಶ್ಚಿತಾರ್ಥ ನೆರವೇರಿದೆ. ಗೋವಾದ ತಾಜ್ ವಿವಾಂತ್ ದಲ್ಲಿ ಸ್ಯಾಂಡಲ್ ವುಡ್ ನಟ ಯಶ್ ಹಾಗೂ ನಟಿ ರಾಧಿಕಾ ನಿಶ್ಚಿತಾರ್ಥ ನೆರವೇರಿದೆ.
‘ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ’ ಗಣ್ಯಾತಿಗಣ್ಯರ ಮುಂದೆ ಉಂಗುರ ಬದಲಾಯಿಸಿಕೊಂಡಿದ್ದಾರೆ. ಅದ್ಧೂರಿ ನಿಶ್ಚಿತಾರ್ಥಕ್ಕೆ ಸ್ಯಾಂಡಲ್ ವುಡ್ ಸ್ಟಾರ್ ಗಳು ಸಾಕ್ಷಿಯಾಗಿದ್ದಾರೆ. ನಟ ಅಂಬರೀಷ್, ಸುಮಲತಾ, ರವಿಚಂದ್ರನ್, ಪುನೀತ್ ಸೇರಿದಂತೆ ಗಣ್ಯಾತಿಗಣ್ಯರು ಎಂಗೇಜ್ ಮೆಂಟ್ ನಲ್ಲಿ ಪಾಲ್ಗೊಂಡಿದ್ದಾರೆ. ಅದ್ಧೂರಿ ಸೆಟ್ ನಲ್ಲಿ ಮೊದಲು ಹೆಣ್ಣು ನೋಡುವ ಶಾಸ್ತ್ರ ನೆರವೇರಿತು. ನಂತ್ರ ಜೋಡಿ ಉಂಗುರ ಬದಲಾಯಿಸಿಕೊಂಡಿದ್ದಾರೆ. ಗೋಕರ್ಣ ಮೂಲದ ರವಿಶಂಕರ್ ನೇತೃತ್ವದಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮಗಳು ನಡೆದಿವೆ.
ರಾಧಿಕಾ ಪಂಡಿತ್ ಆಸೆಯಂತೆಯೇ ಅದ್ದೂರಿಯಾಗಿ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿದೆ. ಉಂಗುರ ಬದಲಾಯಿಸಿಕೊಂಡ ನಂತ್ರ ಅಂಬರೀಷ್ ಹಾಗೂ ಸುಲಮತಾ ಕಾಲಿಗೆ ಬಿದ್ದು ಯಶ್ ಹಾಗೂ ರಾಧಿಕಾ ಆಶೀರ್ವಾದ ಪಡೆದಿದ್ದಾರೆ. ಸ್ಟಾರ್ ಗಳು ನವ ಜೋಡಿಗೆ ಶುಭ ಕೋರಿದ್ದಾರೆ.
ಡಿಸೆಂಬರ್ ನಲ್ಲಿ ಮದುವೆಗೆ ಮುಹೂರ್ತ ಫಿಕ್ಸ್ ಮಾಡಲಾಗಿದೆ. ಪ್ಯಾಲೇಸ್ ಗ್ರೌಂಡ್ ನಲ್ಲಿ ಮೂರು ದಿನಗಳ ಕಾಲ ಮದುವೆ ಸಮಾರಂಭ ನಡೆಯಲಿದೆ. ಅಭಿಮಾನಿಗಳು ನಿರಾಶೆಗೊಳ್ಳುವ ಅಗತ್ಯವಿಲ್ಲ. ಮದುವೆ ಸಮಾರಂಭದ ಒಂದು ದಿನ ಯಶ್ ಹಾಗೂ ರಾಧಿಕಾ ಅಭಿಮಾನಿಗಳ ಮುಂದೆ ಬರಲಿದ್ದಾರೆ.