ಸ್ಯಾಮ್ ಸಂಗ್ ಇಂಡಿಯಾ ತನ್ನ ಪವರ್ ಫುಲ್ ಫೋನ್ ಗ್ಯಾಲಕ್ಸಿ ನೋಟ್ 7 ಅನ್ನು ಲಾಂಚ್ ಮಾಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ಫೋನ್ ಬೆಲೆ 59,990 ರೂಪಾಯಿಗಳಾಗಿದೆ. ಈ ಫೋನ್ ಅನ್ನು ಆಗಸ್ಟ್ 22 ರಿಂದ 30 ರ ಒಳಗಾಗಿ ಕಾಯ್ದಿರಿಸಬಹುದಾಗಿದೆ.
ಗ್ಯಾಲಕ್ಸಿ 7 ಫೋನ್ ಜೊತೆಗೆ ರಿಲಯನ್ಸ್ ಜಿಯೋದ 4 ಜಿ ಪ್ರೀ ವ್ಯೂ ಕೊಡುಗೆ ನೀಡುತ್ತಿದ್ದಾರೆ. ಇದರ ಜೊತೆಗೆ 3 ತಿಂಗಳ ತನಕ ಉಚಿತ ವಾಯ್ಸ್ ಕಾಲಿಂಗ್ ಮತ್ತು ಡಾಟಾ ಸರ್ವೀಸ್ ಕೊಡಲಾಗುತ್ತಿದೆ. ಈ ಫೋನಿನ ವಿಶೇಷತೆ ಏನೆಂದರೆ ಇದರಲ್ಲಿ ಐರಿಸ್ ಸ್ಕ್ಯಾನರ್ ಇದೆ. ಸ್ಯಾಮ್ ಸಂಗ್ ಇದೇ ಮೊದಲ ಬಾರಿಗೆ ಐರಿಸ್ ಸ್ಕ್ಯಾನರ್ ಹೊಂದಿರುವ ಮೊಬೈಲ್ ಬಿಡುಗಡೆ ಮಾಡುತ್ತಿದೆ.
ಕಡಿಮೆ ಬೆಳಕಿನಲ್ಲೂ ಒಳ್ಳೆಯ ಗುಣಮಟ್ಟದ ಫೋಟೋ ಕ್ಲಿಕ್ಕಿಸುವ ರಿಯರ್ ಫಿಕ್ಸಲ್ ಕ್ಯಾಮರಾ ಇದರಲ್ಲಿದೆ. ಇದರಲ್ಲಿ ಎಸ್ ಪೆನ್ ಸ್ಟೈಲ್ ಇರುವುದರಿಂದ ಇದನ್ನು ಪ್ಲೇನ್ ಗ್ಯಾಲಕ್ಸಿ ಎಸ್ 7 ಎಂದು ಕೂಡ ಕರೆಯಬಹುದಾಗಿದೆ. ಗ್ಯಾಲಕ್ಸಿ ಎಸ್ 7 ಮತ್ತು ಎಸ್ 7 ಎಡ್ಜ್, ಮಾರ್ಚ್ ನಲ್ಲಿ ಲಾಂಚ್ ಮಾಡುತ್ತೇವೆ ಎಂದು ಸ್ಯಾಮ್ ಸಂಗ್ ಹೇಳಿದೆ.