ಹಬ್ಬಗಳ ಸಾಲು ಆರಂಭವಾಗಿದೆ. ಈ ಸಂದರ್ಭದಲ್ಲಿ ಮೊಬೈಲ್ ಸೇರಿದಂತೆ ಹಲವು ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿಯನ್ನು ಘೋಷಿಸಲಾಗುತ್ತದೆ. ಈ ಅವಕಾಶವನ್ನು ಬಳಸಿಕೊಂಡು ಮೊಬೈಲ್ ಖರೀದಿಸಬೇಕೆಂದು ಪ್ಲಾನ್ ಮಾಡಿರುವವರಿಗೊಂದು ಕಹಿ ಸುದ್ದಿ ಇಲ್ಲಿದೆ.
ಜಿ.ಎಸ್.ಟಿ. ಜಾರಿಗೆ ಬಂದ ನಂತರ ಮೊಬೈಲ್ ಫೋನ್ ಗಳ ದರ ಶೇ.7 ರಿಂದ 8 ರಷ್ಟು ಹೆಚ್ಚಳವಾಗಬಹುದೆಂದು ಹೇಳಲಾಗುತ್ತಿದೆ. ಜಿ.ಎಸ್.ಟಿ. ದರ ಇನ್ನೂ ನಿಗದಿಯಾಗಿಲ್ಲವಾಗಿದ್ದು, ದರ ನಿರ್ಧಾರವಾದ ಬಳಿಕ ಮೊಬೈಲ್ ಫೋನ್ ಗಳ ದರ ಎಷ್ಟು ಏರಿಕೆಯಾಗಲಿದೆ ಎಂಬ ಸ್ಪಷ್ಟ ಮಾಹಿತಿ ಸಿಗಲಿದೆ.
ಈಗಾಗಲೇ ಹಲವು ರಾಜ್ಯಗಳಲ್ಲಿ ಕೆಲವೊಂದು ವಸ್ತುಗಳಿಗೆ ಹೆಚ್ಚುವರಿ ತೆರಿಗೆ ವಿಧಿಸಲಾಗುತ್ತಿದ್ದು, ಇದು ಆನ್ ಲೈನ್ ಮಾರಾಟದ ಮೇಲೂ ಪ್ರಬಾವ ಬೀರಿದೆ. ಜಿ.ಎಸ್.ಟಿ. ದರ ನಿಗದಿಯಾದ ಬಳಿಕ ಮೊಬೈಲ್ ಫೋನ್ ಗಳ ದರ ಶೇ.7 ರಿಂದ 8 ರಷ್ಟು ಏರಿಕೆಯಾಗಬಹುದೆಂದು ಹೇಳಲಾಗಿದೆ.