ಆಗಸ್ಟ್ 15ಕ್ಕೆ ಎಲ್ಲೆಡೆ ಅದ್ಧೂರಿ ತಯಾರಿ ನಡೆಯುತ್ತಿದೆ. ಸ್ವಾತಂತ್ರ್ಯ ದಿನಾಚರಣೆಗೆ ಇನ್ನು ನಾಲ್ಕು ದಿನ ಮಾತ್ರ ಬಾಕಿ ಇದ್ದು, ದೇಶದಾದ್ಯಂತ ಬಿಗಿ ಭದ್ರತೆ ಒದಗಿಸಲಾಗ್ತಿದೆ. ಶಾಲಾ- ಕಾಲೇಜುಗಳಲ್ಲಿ ಕೂಡ ಮಕ್ಕಳು ಸಂಭ್ರಮದ ತಯಾರಿ ನಡೆಸಿದ್ದಾರೆ. ಏರ್ ಇಂಡಿಯಾ ಕೂಡ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ.
ಈ ಬಾರಿಯ ಸ್ವಾತಂತ್ರ್ಯ ದಿನವನ್ನು ವಿಭಿನ್ನವಾಗಿ ಆಚರಿಸಲು ಏರ್ ಇಂಡಿಯಾ ಮುಂದಾಗಿದೆ. ಆಗಸ್ಟ್ 14 ಮತ್ತು 15ರಂದು ಏರ್ ಇಂಡಿಯಾ ಸಿಬ್ಬಂದಿ, ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ಸಾರಲಿದ್ದಾರೆ. ವಿಮಾನದ ಸಿಬ್ಬಂದಿ ಖಾದಿ ಬಟ್ಟೆ ತೊಟ್ಟು ದೇಶ ಪ್ರೇಮ ಮೆರೆಯಲಿದ್ದಾರೆ.
ಈಗಾಗಲೇ ಏರ್ ಇಂಡಿಯಾ ಸಿಬ್ಬಂದಿಗೆ ಖಾದಿಯನ್ನು ಸಮವಸ್ತ್ರವಾಗಿ ಘೋಷಣೆ ಮಾಡಿದೆ. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಮೂರು ತಿಂಗಳ ಹಿಂದೆ ಏರ್ ಇಂಡಿಯಾ ಜೊತೆ ಒಪ್ಪಂದ ಮಾಡಿಕೊಂಡಿದೆ.