ಹಾಸ್ಯಗಾರ ಹಾಗೂ ಬಾಲಿವುಡ್ ನಟ ಕಪಿಲ್ ಶರ್ಮಾ ಮದುವೆಯಾಗಿದ್ದಾರೆ. ಯಾರಿಗೂ ಹೇಳದೆ ಕಪಿಲ್ ಮದುವೆ ಮಾಡಿಕೊಂಡಿದ್ದಾರೆ. ಇಷ್ಟಕ್ಕೂ ಕಪಿಲ್ ಮದುವೆಯಾಗಿದ್ದು ಬೇರೆ ಯಾರನ್ನೂ ಅಲ್ಲ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಳನ್ನು.
ಜಾಕ್ವೆಲಿನ್ ಫರ್ನಾಂಡಿಸ್, ಕಪಿಲ್ ವಧುವಾಗಿದ್ದಾಳೆ. ಇಷ್ಟೇ ಅಲ್ಲ ಬೇರೆಯವರ ಹೊಟ್ಟೆ ಉರಿಸಲು ಕಪಿಲ್ ಮದುವೆ ಫೋಟೋವನ್ನೂ ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಿದ್ದಾರೆ. ಅದ್ರಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ಕಪಿಲ್ ಗೆ ಕಪಿಲ್ ತಾಯಿ ಆಶೀರ್ವಾದ ಮಾಡ್ತಿದ್ದಾರೆ. ಟ್ವಿಟರ್ ನಲ್ಲಿ ಫೋಟೋ ಜೊತೆ ಜಾಕ್ವೆಲಿನ್ ಫರ್ನಾಂಡಿಸ್ ಗೆ ಟ್ವೀಟ್ ಕೂಡ ಮಾಡಿದ್ದಾರೆ ಕಪಿಲ್.
ಫೋಟೋ ನೋಡಿ ನಿಮಗೆ ಅರ್ಥ ಆಗಿರಬಹುದು. ಇದು ರಿಯಲ್ ಅಲ್ಲ ರೀಲ್ ಮದುವೆ. ಕಪಿಲ್ ಕಾರ್ಯಕ್ರಮಕ್ಕೆ ಬಂದಿದ್ದ ಜಾಕ್ವೆಲಿನ್ ಫರ್ನಾಂಡಿಸ್ ಶೋಗೋಸ್ಕರ ಕಪಿಲ್ ಮದುವೆಯಾಗಿದ್ದಾಳೆ.