ಸುಪ್ರೀಂ ಕೋರ್ಟ್, ದೆಹಲಿಯಲ್ಲಿ ಡಿಸೇಲ್ ವಾಹನಗಳ ಮೇಲೆ ನಿಷೇಧ ಹೇರಿರುವ ಪರಿಣಾಮ ಟಯೋಟಾ ಕಂಪನಿ ಬರೋಬ್ಬರಿ 1,700 ಕೋಟಿ ರೂ. ಗಳ ನಷ್ಟ ಅನುಭವಿಸಿದೆ ಎನ್ನಲಾಗಿದೆ. ಮರ್ಸಿಡೀಸ್ ಸಹ ನಷ್ಟ ಅನುಭವಿಸಿರುವ ಕಂಪನಿಗಳ ಪೈಕಿ ಒಂದಾಗಿದೆ.
ನಿಷೇಧದ ಪರಿಣಾಮ ಇನ್ನೋವಾ ಹಾಗೂ ಫಾರ್ಚೂನರ್ ನ ಸುಮಾರು 8,500 ವಾಹನಗಳು ಮಾರಾಟವಾಗಿಲ್ಲವೆಂದು ಹೇಳಲಾಗಿದೆ. ಈ ವಿಚಾರವನ್ನು ಟಯೋಟಾ ಕಂಪನಿಯ ವಕ್ತಾರರೇ ತಿಳಿಸಿದ್ದು, ಇದಕ್ಕೆ ಪರಿಹಾರೋಪಾಯ ಸಿಗಬಹುದೆಂಬ ನಿರೀಕ್ಷೆಯನ್ನು ಹೊಂದಲಾಗಿದೆ.
ಟಯೋಟಾ ಕಂಪನಿ, ಕಳೆದ ಮೇ ನಲ್ಲಿ ಬಿಡುಗಡೆ ಮಾಡಿರುವ ನ್ಯೂ ಜನರೇಷನ್ ಆವೃತ್ತಿಯ ಇನ್ನೋವಾದ 24,000 ವಾಹನಗಳು ಈಗಾಗಲೇ ಮಾರಾಟವಾಗಿವೆ ಎಂದು ಕಂಪನಿ ತಿಳಿಸಿದ್ದು, ಡಿಸೇಲ್ ವಾಹನ ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್ ಪುನರ್ ಪರಿಶೀಲಿಸಲಿದೆ ಎಂಬ ವಿಶ್ವಾಸವನ್ನು ಹೊಂದಿದೆ.