ರಿಯೋ: ಭಾನುವಾರ ನಡೆದ 4×100 ಮೀಟರ್ ಫ್ರೀಸ್ಟೈಲ್ ರಿಲೇಯಲ್ಲಿ ಅಮೆರಿಕದ ಖ್ಯಾತ ಈಜುಪಟು ಮೈಕೆಲ್ ಫೆಲ್ಪ್ಸ್ ತಮ್ಮ 19 ನೇ ಚಿನ್ನಕ್ಕೆ ಕೊರಳೊಡ್ಡಿದ್ದಾರೆ. ಈ ಮೂಲಕ ಅವರು ವೃತ್ತಿಜೀವನದಲ್ಲಿ 19 ಚಿನ್ನ, 2 ಬೆಳ್ಳಿ, 2 ಕಂಚು ಸೇರಿದಂತೆ ಒಟ್ಟು 23 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮೈಕೆಲ್ ಅವರನ್ನೊಳಗೊಂಡ ಅಮೆರಿಕ ತಂಡ 3 ನಿಮಿಷ 9.92 ಸೆಕೆಂಡ್ ಗಳಲ್ಲಿ ಗುರಿ ಸೇರುವುದರ ಮೂಲಕ ಮೊದಲ ಸ್ಥಾನ ಪಡೆದಿದ್ದಲ್ಲದೇ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವಲ್ಲಿ ಯಶಸ್ವಿಯಾಯಿತು.
ಎರಡನೇ ಹಂತದಲ್ಲಿ ಸ್ಪರ್ಧೆ ಎದುರಿಸಿದ ಮೈಕೆಲ್ ಅವರು 47.12 ಸೆಕೆಂಡ್ ನಲ್ಲಿ ಈಜಿ ಫ್ರಾನ್ಸ್ ಸ್ಪರ್ಧಿಯನ್ನು ಹಿಂದಿಕ್ಕಿದರು. ಇವರಿಗೆ ನಿಕೋಲ್ ಮತ್ತು ಪತ್ರಬೂಮರ್ ಸಾಥ್ ನೀಡಿದರು. ಸ್ಪರ್ಧೆಯಲ್ಲಿ ಫ್ರಾನ್ಸ್ ಗೆ ಬೆಳ್ಳಿ ಮತ್ತು ಆಸ್ಟ್ರೇಲಿಯಾಕ್ಕೆ ಕಂಚು ಲಭಿಸಿತು.