ಒಲಂಪಿಕ್ಸ್ ನಲ್ಲಿ ಪಾಲ್ಗೊಳ್ಳುವುದೇ ಕ್ರೀಡಾಪಟುಗಳ ದೊಡ್ಡ ಕನಸು. ಅದ್ರಲ್ಲೂ ಪ್ರತಿಸ್ಪರ್ಧಿಗಳನ್ನು ಮಣಿಸಿ ಪದಕವನ್ನು ಗೆದ್ದರಂತೂ ತಮ್ಮ ಜೀವನ ಸಾರ್ಥಕ ಎಂದುಕೊಳ್ಳುತ್ತಾರೆ ಆಟಗಾರರು. ಪದಕ ಪಡೆದ ಖುಷಿಯಲ್ಲಿರುವ ಅವರನ್ನು ಹಿಡಿಯೋದು ಅಸಾಧ್ಯ. ರಿಯೊ ಒಲಂಪಿಕ್ಸ್ ನಲ್ಲಿ 56 ಕೆಜಿ ಭಾರ ಎತ್ತುವ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಥೈಲ್ಯಾಂಡ್ ಆಟಗಾರನಿಗೆ ಖುಷಿಯ ಕ್ಷಣ ದುಃಖದ ಕ್ಷಣವಾಗಿ ಮಾರ್ಪಟ್ಟಿದೆ.
ಥೈಲ್ಯಾಂಡ್ ನ ಸಿನ್ ಫಿಟ್ ಹೆಸರಿನ ಯುವ ಕ್ರೀಡಾಪಟು ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ತೋರಿ ಕಂಚಿನ ಪದಕ ಗಳಿಸುವಲ್ಲಿ ಯಶಸ್ವಿಯಾದ್ರು. ಮೊಮ್ಮಗನ ಸಾಧನೆಯನ್ನು ನೋಡಿದ ಸಿನ್ ಫೆಟ್ ಅವರ 84 ವರ್ಷದ ಅಜ್ಜಿಗೆ ಹೃದಯಾಘಾತವಾಗಿದೆ. ಮೊಮ್ಮಗ ಐತಿಹಾಸಿಕ ಸಾಧನೆ ಮಾಡ್ತಿರುವುದನ್ನು ಟಿವಿಯಲ್ಲಿ ನೋಡ್ತಾ ಇದ್ದ ಅಜ್ಜಿ ಅಲ್ಲಿಯೇ ನಿಧನರಾಗಿದ್ದಾರೆ.