ಸೇಂಟ್ ಲೂಸಿಯಾ: ವೆಸ್ಟ್ ಇಂಡೀಸ್ ನ ಸೇಂಟ್ ಲೂಸಿಯಾದಲ್ಲಿರುವ ಡರೆನ್ ಸಾಮಿ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದಿನಿಂದ 3ನೇ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಹೊಸ ಉತ್ಸಾಹದಲ್ಲಿದೆ.
ಕೆರೆಬಿಯನ್ ನಾಡಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಭಾರತ ಗೆದ್ದಿತ್ತು. 2ನೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಡ್ರಾ ಮಾಡಿಕೊಳ್ಳುವಲ್ಲಿ ಸಫಲವಾಗಿತ್ತು. ಭಾರತೀಯ ಕಾಲಮಾನ ಮಂಗಳವಾರ ರಾತ್ರಿ 7.30ಕ್ಕೆ ಸೇಂಟ್ ಲೂಸಿಯಾದಲ್ಲಿ 3ನೇ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ವಿರಾಟ್ ಕೊಹ್ಲಿ ಹಾಗೂ ಜೇಸನ್ ಹೋಲ್ಡರ್ ಬಳಗ ಮುಖಾಮುಖಿಯಾಗಲಿವೆ. ಕಳೆದ ಪಂದ್ಯದಲ್ಲಿ ಶತಕ ಗಳಿಸಿದ್ದ ಕನ್ನಡಿಗ ಕೆ.ಎಲ್.ರಾಹುಲ್ ಈ ಪಂದ್ಯದಲ್ಲಿಯೂ ಸಾಧನೆ ಮಾಡುವ ಉತ್ಸಾಹದಲ್ಲಿದ್ದಾರೆ.
ಟೀಂ ಇಂಡಿಯಾ ಕೆರೆಬಿಯನ್ ನಾಡಲ್ಲಿ ನಡೆಯುವ ಈ 3ನೇ ಟೆಸ್ಟ್ ಪಂದ್ಯ ಗೆದ್ದರೆ ವಿರಾಟ್ ಕೊಹ್ಲಿ, ಒಂದೇ ಸರಣಿಯಲ್ಲಿ 2 ಪಂದ್ಯಗಳನ್ನು ಗೆದ್ದ ಭಾರತದ ಮೊದಲ ನಾಯಕ ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ. ಇದುವರೆಗೆ ನಾಯಕತ್ವ ವಹಿಸಿದವರು ಕೆರೆಬಿಯನ್ ನಾಡಲ್ಲಿ ಒಂದು ಪಂದ್ಯದ ಗೆಲುವು ತಂದುಕೊಟ್ಟಿದ್ದಾರೆ.