ರಿಯೊ ಒಲಂಪಿಕ್ಸ್ ನಲ್ಲಿ ಭಾರತ ಮೊದಲ ಮುನ್ನಡೆ ಸಾಧಿಸಿದೆ. ಭಾರತ ಹಾಕಿ ತಂಡ ಐರ್ಲೆಂಡ್ ವಿರುದ್ದ 3-1 ಗೋಲುಗಳ ಗೆಲುವು ಸಾಧಿಸಿದೆ.
ಮೊದಲಾರ್ಧದಲ್ಲಿ ಭಾರತ ಹಾಕಿ ಟೀಂ ಒಂದು ಗೋಲ್ ಬಾರಿಸುವಲ್ಲಿ ಯಶಸ್ವಿಯಾಯ್ತು. ದ್ವಿತೀಯಾರ್ಧದಲ್ಲಿ ಕೂಡ ಭಾರತ ಒಂದು ಗೋಲ್ ಬಾರಿಸ್ತು. ನಂತ್ರ ಐರ್ಲೆಂಡ್ ಕೂಡ ಒಂದು ಗೋಲು ಬಾರಿಸಿ ಭಾರತ ತಂಡಕ್ಕೆ ಸಮನಾಗಿ ನಿಲ್ತು. ನಂತ್ರ ಭಾರತ ಮತ್ತೊಂದು ಗೋಲು ಬಾರಿಸಿ 3-1 ಮುನ್ನಡೆ ಕಾಯ್ದುಕೊಂಡ್ತು. ಇದ್ರ ನಂತ್ರ ಯಾವುದೇ ತಂಡ ಗೋಲ್ ಬಾರಿಸಲಿಲ್ಲ. ಹಾಗಾಗಿ ಭಾರತ 3-1 ಅಂತರದಲ್ಲಿ ಗೆಲುವನ್ನು ತನ್ನದಾಗಿಸಿಕೊಂಡಿತು.
ಬಿ ಗುಂಪಿನಲ್ಲಿರುವ ಭಾರತ ಐರ್ಲೆಂಡ್, ಅರ್ಜೆಂಟೀನಾ, ನೆದರ್ಲ್ಯಾಂಡ್ಸ್, ಕೆನಡಾ ಮತ್ತು ಜರ್ಮನಿಯ ಜೊತೆ ಸೆಣೆಸಬೇಕಾಗಿದೆ. ಚಾಂಪಿಯನ್ ಟ್ರೋಪಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಹಾಕಿ ಟೀಂ ಅದೇ ಉತ್ಸಾಹದಲ್ಲಿದೆ. ಚಿನ್ನದ ನಿರೀಕ್ಷೆಯಲ್ಲಿ ಹಾಕಿ ಟೀಂ ಮೈದಾನಕ್ಕಿಳಿದಿದೆ. ಭಾರತದ ತಂಡ ಈವರೆಗೆ 8 ಚಿನ್ನ, 1 ಬೆಳ್ಳಿ ಹಾಗೂ 2 ಕಂಚು ಸೇರಿ 11 ಪ್ರಶಸ್ತಿಗಳನ್ನು ಗೆದ್ದು ತಂದಿದೆ.