ಒಲಂಪಿಕ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲಲು ಚೀನಾ ಎತ್ತಿದ ಕೈ. ಇಷ್ಟೆಲ್ಲ ಪದಕಗಳನ್ನು ಪಡೆಯಲು ಚೀನಾ ಏನೆನೆಲ್ಲ ಕಸರತ್ತು ಮಾಡುತ್ತೆ ಗೊತ್ತಾ..?
ಚೀನಾ ಸರಕಾರ ಇದನ್ನು ಎಷ್ಟು ಪ್ರತಿಷ್ಟೆಯ ಪ್ರಶ್ನೆಯನ್ನಾಗಿ ತೆಗೆದುಕೊಳ್ಳುತ್ತದೆಯೆಂದರೇ, ಅಲ್ಲಿ ಚಿಕ್ಕ ಮಕ್ಕಳ ಮೇಲೆ ತುಂಬ ಒತ್ತಡ ಹೇರಲಾಗುತ್ತದೆ. ಚಿಕ್ಕಂದಿನಲ್ಲೇ ಅವರಿಗೆ ಪುಲ್ ಅಪ್ಸ್, ಜಿಮ್ನಾಸ್ಟಿಕ್ ಹಾಗೂ ಇನ್ನಿತರ ಆಟಗಳ ತರಬೇತಿ ನೀಡಲಾಗುತ್ತೆ.
ತರಬೇತಿ ತುಂಬ ಕಠಿಣವಾಗಿಯೇ ಇರುತ್ತೆ ಎಂದರೆ ತಪ್ಪಾಗದು. ಏಕೆಂದರೆ ಶಿಚಾಹೈ ಎಂಬ ಶಾಲೆಯಲ್ಲಿ ಕೇವಲ 6 ವರ್ಷದ ಮಕ್ಕಳನ್ನು ಕಠಿಣವಾಗಿ ದಂಡಿಸುತ್ತಾರೆ. ಅವರು ಹಲವು ಗಂಟೆಗಳ ಕಾಲ ಪ್ರ್ಯಾಕ್ಟೀಸ್ ಮಾಡಬೇಕಾಗುತ್ತೆ. ಅಲ್ಲಿನ ಶಾಲೆಗಳಲ್ಲಿ ಇದು ಸರ್ವೇ ಸಾಮಾನ್ಯ ಎನಿಸಿಬಿಟ್ಟಿದೆ.
ಶಾಲೆಯ ಮಕ್ಕಳಿಗೆ ಒಂದು ದಿನವೂ ರಜಾ ಸಿಗುವುದಿಲ್ಲ. ಶಾಲೆಯ ವೇಳೆ ಮುಗಿದ ನಂತರ 4 ಗಂಟೆ ಜಿಮ್ನಾಸ್ಟಿಕ್, ಟೇಬಲ್ ಟೆನಿಸ್, ವಾಲಿಬಾಲ್, ಬ್ಯಾಡ್ಮಿಂಟನ್ ಮುಂತಾದವುಗಳ ತರಬೇತಿ ನೀಡಲಾಗುತ್ತದೆ. ಮಕ್ಕಳು ನೋವಿನಿಂದ ಬಳಲುತ್ತಿದ್ದರೂ ಅವರಿಗೆ ಯಾವುದೇ ಕನಿಕರ ತೋರಿಸಲಾಗುವುದಿಲ್ಲ. ಅಲ್ಲಿನ ತರಬೇತುದಾರರು ಮಕ್ಕಳೊಂದಿಗೆ ತುಂಬ ಕಠಿಣವಾಗಿ ನಡೆದುಕೊಳ್ಳುತ್ತಾರೆ ಎನ್ನಲಾಗಿದೆ.