ನಿಜಕ್ಕೂ ಇದು ಅಚ್ಚರಿ ಹುಟ್ಟಿಸುವಂಥ ಘಟನೆ. ಲಂಡನ್ ನ ಆಸ್ಪತ್ರೆಯೊಂದರ ಮುಖ್ಯದ್ವಾರದಲ್ಲಿ ನಿಂತಿದ್ದಾಗ್ಲೇ ಗರ್ಭಿಣಿಯೊಬ್ಬಳಿಗೆ ಹೆರಿಗೆಯಾಗಿಬಿಟ್ಟಿದೆ.
ಜೆಸ್ಸಿಕಾ ಸ್ಟಬ್ಬಿನ್ಸ್ ಎಂಬಾಕೆಗೆ ಇದ್ದಕ್ಕಿದ್ದಂತೆ ಹೆರಿಗೆ ನೋವು ಕಾಣಿಸಿಕೊಂಡ್ತು. ಆಕೆಯ ಪತಿ ಕಾರ್ ಪಾರ್ಕ್ ಮಾಡಿ ಬರಲು ಹೋಗಿದ್ದ. ಜೆಸ್ಸಿಕಾ ಇನ್ನೂ ಆಸ್ಪತ್ರೆಯೊಳಕ್ಕೆ ಎಂಟ್ರಿ ಕೊಟ್ಟಿರಲಿಲ್ಲ. ಮುಖ್ಯದ್ವಾರದಿಂದ ಒಳಕ್ಕೆ ಬರುತ್ತಿದ್ದಾಗ ನಿಂತಲ್ಲೇ ಆಕೆಗೆ ಹೆರಿಗೆಯಾಗಿದೆ.
ಕೇವಲ ಒಂದು ನಿಮಿಷದಲ್ಲಿ ಮಗು ಜನಿಸಿದೆ. ದಂಪತಿಗೆ ಹೆಣ್ಣು ಮಗು ಜನಿಸಿದ್ದು ಲೂಸಿ ಎಂದು ಹೆಸರಿಡಲಾಗಿದೆ. ಹೆರಿಗೆ ದೃಶ್ಯ ಆಸ್ಪತ್ರೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನಿಜಕ್ಕೂ ಇದು ಆಘಾತಕಾರಿ ಜೊತೆಗೆ ಎಕ್ಸೈಟಿಂಗ್ ಎನ್ನುತ್ತಾರೆ ಜೆಸ್ಸಿಕಾ.
ಅಷ್ಟು ಬೇಗ ಮಗು ಜನಿಸಬಹುದೆಂಬ ಕಲ್ಪನೆ ಕೂಡ ಅವರಿಗಿರಲಿಲ್ಲ. ಕೇವಲ ಒಂದು ನಿಮಿಷದೊಳಗೆ ಹೆರಿಗೆಯಾಗಿದ್ದರಿಂದ ಕುಳಿತುಕೊಳ್ಳಲೂ ಸಾಧ್ಯವಾಗಲಿಲ್ಲ, ನಿಂತಲ್ಲೇ ಹೆರಿಗೆ ಆಯ್ತು ಎಂದಿದ್ದಾರೆ ಜೆಸ್ಸಿಕಾ.