ವಾಷಿಂಗ್ಟನ್: ಮಗನಿಗೆ ವ್ಯವಹಾರದ ಜ್ಞಾನ ತಿಳಿಯಲಿ, ಜನಸಾಮಾನ್ಯರ ಕಷ್ಟ ಗೊತ್ತಾಗಲಿ ಎಂದು ಪ್ರಸಿದ್ದ ವಜ್ರದ ವ್ಯಾಪಾರಿಯೊಬ್ಬರು ತಮ್ಮ ಮಗನನ್ನು ಕೇರಳದಲ್ಲಿ ಕೆಲಸಕ್ಕೆ ಕಳುಹಿಸಿದ್ದು, ಇತ್ತೀಚೆಗಷ್ಟೇ ಭಾರೀ ಸುದ್ದಿಯಾಗಿತ್ತು.
ಇದೀಗ ವಿಶ್ವದ ದೊಡ್ಡಣ್ಣ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ಪುತ್ರಿ ಸುಖದ ಸುಪ್ಪತ್ತಿಗೆಯನ್ನು ಬಿಟ್ಟು ಹೋಟೆಲ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡಿರುವುದು ಭಾರೀ ಸುದ್ದಿಯಾಗಿದೆ. ಬರಾಕ್ ಒಬಾಮಾ ಅವರ ದ್ವಿತೀಯ ಪುತ್ರಿಯಾಗಿರುವ ಸಶಾ, ಅಟ್ಲಾಂಟಿಕ್ ದ್ವೀಪ ಮಾರ್ತಾಸ್ ವಿನ್ನೆ ಯಾರ್ಡ್ ನಲ್ಲಿರುವ ಫುಡ್ ಪಾಯಿಂಟ್ ರೆಸ್ಟೋರೆಂಟ್ ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾಳೆ. ಆಕೆಗೆ ರಜೆ ಇರುವುದರಿಂದ ಕೆಲಸಕ್ಕೆ ಸೇರಿಕೊಂಡು ವ್ಯಾವಹಾರಿಕ ಜ್ಞಾನ ತಿಳಿದುಕೊಳ್ಳಲು ಮುಂದಾಗಿದ್ದಾಳೆ.
ರೆಸ್ಟೋರೆಂಟ್ ನಲ್ಲಿ ಸಮವಸ್ತ್ರ ಧರಿಸಿ ಎಲ್ಲರಂತೆಯೇ ಕೆಲಸ ಮಾಡುತ್ತಿರುವ ಆಕೆ, ತಾನು ಯಾರೆಂಬುದನ್ನು ಜೊತೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಹೇಳಿರಲಿಲ್ಲ. ಆಕೆಗೆ 6 ಮಂದಿ ಏಜೆಂಟರು ಗುಪ್ತವಾಗಿ ಭದ್ರತೆ ಒದಗಿಸಿದ್ದಾರೆ. ಈ ಹೋಟೆಲ್ ಮಾಲೀಕ ಒಬಾಮಾ ಅವರಿಗೆ ಪರಿಚಿತರಾಗಿದ್ದು, ಇಲ್ಲೇ ಸಶಾ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.