ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕನಸು ದಶಕದ ನಂತರ ನನಸಾಗಿದೆ. ಕೊಹ್ಲಿಗೆ ಬಾಲ್ಯದಿಂದ್ಲೂ ರಾಹುಲ್ ದ್ರಾವಿಡ್ ಫೇವರಿಟ್. 17 ವರ್ಷದವರಾಗಿದ್ದಾಗ ಕೊಹ್ಲಿ ದ್ರಾವಿಡ್ ಜೊತೆ ಫೋಟೋ ತೆಗೆಸಿಕೊಂಡಿದ್ರು.
ದ್ರಾವಿಡ್ ರಂತೆ ಅದ್ಭುತ ಕ್ರಿಕೆಟಿಗನಾಗಬೇಕು ಅನ್ನೋ ಕನಸು ಕಂಡಿದ್ರು. ಇದೀಗ ಸತತ ಪರಿಶ್ರಮದಿಂದ ಕೊಹ್ಲಿ ಯಶಸ್ಸು ಸಾಧಿಸಿದ್ದಾರೆ. ಅದ್ಭುತ ಆಟ ಪ್ರದರ್ಶಿಸುತ್ತಿದ್ದಾರೆ. 2014-15ರಲ್ಲಿ ಕೊಹ್ಲಿ ಮೊದಲ ಬಾರಿಗೆ ಭಾರತ ಟೆಸ್ಟ್ ತಂಡದ ಸಾರಥ್ಯ ವಹಿಸಿದ್ರು. ಆಸ್ಟ್ರೇಲಿಯಾ ವಿರುದ್ಧ ಭಾರತ 2-0 ಅಂತರದಿಂದ ಸರಣಿ ಸೋತಿತ್ತು.
ಆಗ ರಾಹುಲ್ ದ್ರಾವಿಡ್ ಅವರೇ ಕೊಹ್ಲಿ ಸಂದರ್ಶನ ಮಾಡಿದ್ರು. ಅದಾದ ಬಳಿಕ ಕೊಹ್ಲಿ ತಂಡವನ್ನು ಸತತವಾಗಿ ಗೆಲುವಿನ ದಡ ಮುಟ್ಟಿಸ್ತಿದ್ದಾರೆ. ಇದೀಗ ವಿಂಡೀಸ್ ವಿರುದ್ಧ ಕೂಡ ಟೀಂ ಇಂಡಿಯಾ ಗೆದ್ದು ಬೀಗುತ್ತಿದೆ. ಕೊಹ್ಲಿ ತಮ್ಮ ವೃತ್ತಿ ಜೀವನದ ಮೊದಲ ದ್ವಿಶತಕ ದಾಖಲಿಸಿದ್ದಾರೆ. ಈ ಸಾಧನೆಗೆ ಸ್ಪೂರ್ತಿ ರಾಹುಲ್ ದ್ರಾವಿಡ್ ಎಂದಿರುವ ಕೊಹ್ಲಿ, ಹಳೆಯ ನೆನಪುಗಳನ್ನು ಟ್ವಿಟ್ಟರ್ ನಲ್ಲಿ ಮೆಲುಕು ಹಾಕಿದ್ದಾರೆ.