ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ)ವಿಧೇಯಕಕ್ಕೆ ರಾಜ್ಯಸಭೆಯಲ್ಲಿ ಸುದೀರ್ಘ 7 ಗಂಟೆಗಳ ಚರ್ಚೆಯ ನಂತರ, ಸರ್ವಾನುಮತದ ಅನುಮೋದನೆ ದೊರೆತಿದೆ. ದೇಶಾದ್ಯಂತ ಸರಕು ಮತ್ತು ಸೇವೆಗಳ ಮೇಲೆ ವಿಧಿಸಲಾಗುವ ಏಕರೂಪದ ಸಾಮಾನ್ಯ ಪರೋಕ್ಷ ತೆರಿಗೆ ಇದಾಗಿದೆ.
2014ರ ಮೇ 6ರಂದು ಲೋಕಸಭೆಯಲ್ಲಿ ಅನುಮೋದನೆ ಪಡೆದುಕೊಂಡಿದ್ದ ಜಿ.ಎಸ್.ಟಿ.ಗೆ ರಾಜ್ಯಸಭೆಯಲ್ಲಿಯೂ ಅನುಮೋದನೆ ಸಿಕ್ಕಂತಾಗಿದೆ. ಸರಕು, ಸೇವೆಗಳ ಮೇಲೆ ಹೆಚ್ಚುವರಿ ತೆರಿಗೆಯನ್ನು ತೊಡೆದುಹಾಕುವುದು, ಪ್ರಸ್ತುತ ಜಾರಿಯಲ್ಲಿರುವ ವ್ಯವಸ್ಥೆಯಲ್ಲಿ ಉತ್ಪನ್ನದ ಮೂಲ ಬೆಲೆಯ ಬದಲಿಗೆ, ತಯಾರಿಕಾ ಹಂತದಲ್ಲಿ ಕಚ್ಛಾವಸ್ತು ಸೇರಿದಂತೆ, ಇದಕ್ಕೂ ಮೊದಲು ಆ ಉತ್ಪನ್ನದ ಮೇಲೆ ವಿಧಿಸಲಾದ ತೆರಿಗೆಯನ್ನು ಕೂಡ ಸೇರಿಸಿ, ಮುಂದಿನ ಹಂತದ ತೆರಿಗೆಯನ್ನು ಲೆಕ್ಕ ಹಾಕಲಾಗುತ್ತದೆ ಎಂದು ಹೇಳಲಾಗಿದೆ.
ಸಂವಿಧಾನದ 122ನೇ ತಿದ್ದುಪಡಿಯೊಂದಿಗೆ ಎಲ್ಲಾ ರಾಜಕೀಯ ಪಕ್ಷಗಳ ಸಲಹೆಯನ್ನು ಪಡೆದುಕೊಂಡು, ರಾಜ್ಯಸಭೆಯಲ್ಲಿ ವಿಧೇಯಕ ಮಂಡಿಸಿದ್ದು, ಎ.ಐ.ಎ.ಡಿ.ಎಂ.ಕೆ. ಸಭಾತ್ಯಾಗ ಮಾಡಿತು. ನಂತರ ವಿಧೇಯಕವನ್ನು ಮತಕ್ಕೆ ಹಾಕಿದ್ದು, 203 ಮತಗಳಿಂದ ಅನುಮೋದನೆ ದೊರೆಯಿತು.