ಬೀಜಿಂಗ್: ಭೂತ, ಪ್ರೇತ, ಪಿಶಾಚಿ, ಆತ್ಮ ಇವುಗಳೆಲ್ಲ ಕೇವಲ ಮೂಢನಂಬಿಕೆಗಳು. ಹಾಗೆಲ್ಲ ಏನೂ ಇರುವುದಿಲ್ಲ ಎಂದು ಹಲವರು ವಾದಿಸುತ್ತಾರೆ. ಆದರೆ ಕೆಲವು ಸನ್ನಿವೇಶಗಳು, ದೃಶ್ಯಗಳು ನಮ್ಮನ್ನು ಅದೇ ಮೂಢನಂಬಿಕೆಯ ಕಡೆ ವಾಲುವಂತೆ ಮಾಡುತ್ತದೆ. ಅಂತಹ ಒಂದು ಘಟನೆ ಇಲ್ಲಿದೆ ನೋಡಿ..
ಚೀನಾದಲ್ಲಿ ಒಬ್ಬ ಮಹಿಳೆ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾಳೆ. ಅವಳು ಮೃತಪಟ್ಟ ಮೇಲೆ ಅವಳ ದೇಹದಿಂದ ಬಿಳಿ ಬಣ್ಣದ ಮನುಷ್ಯಾಕೃತಿಯೊಂದು ಎದ್ದುಹೋಗಿದೆ. ಈ ದೃಶ್ಯ ಆಸ್ಪತ್ರೆಯ ಸಿಸಿ ಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ.
ಈ ದೃಶ್ಯಾವಳಿ ಎಷ್ಟು ನಿಜವೋ ಸುಳ್ಳೋ ಗೊತ್ತಿಲ್ಲ. ಆದರೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ವೈರಲ್ ಆಗಿದೆ. ಅಲ್ಲದೇ ದೆವ್ವ, ಭೂತ, ಆತ್ಮದ ಕುರಿತ ಚರ್ಚೆಗೆ ಕಾರಣವಾಗಿದೆ.