ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಬಲ ಆಕಾಂಕ್ಷಿ ಎಂದೇ ಪರಿಗಣಿಸಲ್ಪಟ್ಟಿರುವ ಡೊನಾಲ್ಡ್ ಟ್ರಂಪ್ ಹಾಗೂ ರಷ್ಯಾದ ಮಾಜಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಲಿಪ್ ಲಾಕ್ ಮೂಲಕ ಚುಂಬಿಸಿಕೊಂಡಿರುವ ಫೋಟೋ ವೈರಲ್ ಆಗಿದೆ.
ಲಿಥುವೇನಿಯಾದ ವಿಲ್ನಿಯಸ್ ಸಿಟಿಯಲ್ಲಿರುವ ರೆಸ್ಟೋರೆಂಟ್ ಒಂದರ ಎದುರು ಇರುವ ಗೋಡೆಯ ಮೇಲೆ, ಡೊನಾಲ್ಡ್ ಟ್ರಂಪ್ ಮತ್ತು ವ್ಲಾದಿಮರ್ ಪುಟಿನ್ ಚುಂಬಿಸಿಕೊಂಡಿರುವಂತೆ, ದೊಡ್ಡದಾದ ಉಬ್ಬು ಶಿಲ್ಪವನ್ನು ರಚಿಸಲಾಗಿದೆ. ಮಿಂಡೋಗಸ್ ಬೊನಾನ್ ಎಂಬ ಕಲಾವಿದ ಈ ಶಿಲ್ಪವನ್ನು ರಚಿಸಿದ್ದು, ಈ ಕಲಾವಿದನ ಕಾರ್ಯಕ್ಕೆ ಹೋಟೆಲ್ ಪಾಲುದಾರರಾದ ಡೊಮಿಕ್ಯುಕಾಸ್ ಸೆಕುಸ್ಕಾಸ್ ಅವರು ಕೂಡ ಬೆಂಬಲ ನೀಡಿದ್ದಾರೆ.
ಅಮೆರಿಕ ಮತ್ತು ರಷ್ಯಾ ನಡುವೆ ಮೊದಲಿನಿಂದಲೂ ಅಷ್ಟಕಷ್ಟೇ. ಈ ದೇಶಗಳ ಸಂಬಂಧ ಸುಧಾರಿಸಬೇಕೆಂಬ ಆಶಯದೊಂದಿಗೆ ಈ ಶಿಲ್ಪ ರಚಿಸಲಾಗಿದೆ ಎಂದು ಮಿಂಡೋಗಸ್ ಹೇಳಿದ್ದಾರೆ. ಈ ಚುಂಬನದ ಫೋಟೋ ವಿಶ್ವದಾದ್ಯಂತ ವೈರಲ್ ಆಗಿದ್ದು, ಅಪಾರ ಸಂಖ್ಯೆಯ ಜನ ವೀಕ್ಷಿಸಿದ್ದಾರೆ.