ನವದೆಹಲಿ: ನವದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷಕ್ಕೆ ಮತ್ತೊಮ್ಮೆ ಆಘಾತವಾಗಿದೆ. ಪಕ್ಷಕ್ಕೆ ಮುಜುಗರ ಉಂಟಾಗುವ ಘಟನೆಯೂ ಇದಾಗಿದೆ. ಹೆಣ್ಣುಮಕ್ಕಳಿಗೆ ಕಿರುಕುಳ ನೀಡಿದ, ಮೊದಲಾದ ಕಾರಣಕ್ಕೆ ಈಗಾಗಲೇ ಮೂವರು ಶಾಸಕರು ಬಂಧನಕ್ಕೆ ಒಳಗಾಗಿದ್ದಾರೆ.
ಇದೀಗ ಮತ್ತೊಬ್ಬ ಶಾಸಕ ಬಂಧನವಾಗುವ ಮೂಲಕ ಆಮ್ ಆದ್ಮಿ ಪಕ್ಷಕ್ಕೆ ಮತ್ತೆ ಹಿನ್ನಡೆಯಾಗಿದ್ದು, ಪಕ್ಷದ ನಾಯಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮುಜುಗರ ಅನುಭವಿಸುವಂತಾಗಿದೆ. ಆಪ್ ಪಕ್ಷದ ಕಾರ್ಯಕರ್ತೆ ಸೋನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಶರದ್ ಚೌಹಾಣ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ನವದೆಹಲಿಯ ನರೇಲಾ ಪ್ರದೇಶದ ಆಪ್ ಕಾರ್ಯಕರ್ತೆ ಸೋನಿಗೆ ಪಕ್ಷದ ಮುಖಂಡರು, ಲೈಂಗಿಕ ಕಿರುಕುಳ ನೀಡಿದ್ದು, ಆಕೆ ದೂರು ನೀಡಿದ್ದಳು.
ದೂರನ್ನು ವಾಪಸ್ ಪಡೆಯುವಂತೆ ಆಕೆಗೆ ಒತ್ತಡ ಹೇರಿ ಬೆದರಿಕೆ ಹಾಕಲಾಗಿತ್ತು. ಈ ಪ್ರಕರಣದಲ್ಲಿ ಶಾಸಕ ಚೌಹಾಣ್ ಆರೋಪಿಗಳ ಪರವಾಗಿದ್ದರು ಎನ್ನಲಾಗಿದೆ. ಸೋನಿ ಆತ್ಮಹತ್ಯೆ ಪ್ರಕರಣದ ನಂತರ ತನಿಖೆ ನಡೆಸಿದ ಪೊಲೀಸರು ಶಾಸಕ ಚೌಹಾಣ್ ಅವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.