ಆರು ವರ್ಷದ ಬಾಲಕಿಯನ್ನು ಮದುವೆಯಾದ ಆರೋಪದ ಮೇಲೆ 60 ವರ್ಷದ ಮೌಲ್ವಿಯನ್ನು ಅಫ್ಘಾನಿಸ್ತಾನದಲ್ಲಿ ಬಂಧಿಸಲಾಗಿದೆ. ಮೌಲ್ವಿ ಮೊಹಮ್ಮದ್ ಕರೀಮ್, ಪೋಷಕರೇ ಮಗುವನ್ನು ನನಗೆ ಉಡುಗೊರೆಯಾಗಿ ನೀಡಿದ್ದಾರೆಂದಿದ್ದಾನೆ.
ಮೌಲ್ವಿ ಆರೋಪನ್ನು ತಳ್ಳಿ ಹಾಕಿರುವ ಪೋಷಕರು, ಬಾಲಕಿಯನ್ನು ಮೌಲ್ವಿ ಕಿಡ್ನಾಪ್ ಮಾಡಿದ್ದಾನೆಂದು ಆರೋಪಿಸಿದ್ದಾರೆ. ಬಾಲಕಿ ಅಪಹರಣ ಹಾಗೂ ಅಪ್ರಾಪ್ತೆಯ ಜೊತೆ ಮದುವೆಯಾದ ಆರೋಪ ಹೊರಿಸಲಾಗಿದೆ. ಮೌಲ್ವಿಯನ್ನು ಬಂಧಿಸಿರುವ ಪೊಲೀಸರು ಜೈಲಿಗಟ್ಟಿದ್ದಾರೆ.
ಬಾಲಕಿಯನ್ನು ಮಕ್ಕಳ ಕಲ್ಯಾಣ ಕೇಂದ್ರದಲ್ಲಿಡಲಾಗಿದೆ. ಮಗು ಈ ಬಗ್ಗೆ ಏನೂ ಹೇಳ್ತಾ ಇಲ್ಲ. ನನಗೆ ಭಯವಾಗ್ತಿದೆ ಎಂದಷ್ಟೇ ಹೇಳ್ತಿದ್ದಾಳೆಂದು ಅಧಿಕಾರಿಗಳು ಹೇಳಿದ್ದಾರೆ. ಮೌಲ್ವಿ ಪ್ರಕಾರ ಆತ ರಂಜಾನ್ ವೇಳೆ ಬಾಲಕಿಯನ್ನು ಮದುವೆಯಾಗಿದ್ದಾನೆ. ಈ ವೇಳೆ 30-40 ಮಂದಿ ಉಪಸ್ಥಿತರಿದ್ದರು ಎನ್ನಲಾಗಿದೆ. ಬಾಲಕಿ ಜೊತೆ ಶಾರೀರಿಕ ಸಂಬಂಧ ಬೆಳೆಸಿಲ್ಲ ಎಂದು ಮೌಲ್ವಿ ಹೇಳಿದ್ದಾನೆ.