ನವದೆಹಲಿ: ಅತ್ಯಾಚಾರ ಎಸಗಿದ್ದ ಆರೋಪದ ಮೇಲೆ, ನ್ಯಾಯಾಂಗ ಬಂಧನದಲ್ಲಿದ್ದ ಸಿನಿಮಾ ಸಹ ನಿರ್ದೇಶಕರೊಬ್ಬರು ಅಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ನಿರ್ದೇಶಕರೇ ತಾವು ತಪ್ಪು ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ.
ಅತ್ಯಾಚಾರ ಎಸಗಿದ್ದ ಆರೋಪದ ಮೇಲೆ, ಕಳೆದ ಜೂನ್ 22ರಿಂದ ನ್ಯಾಯಾಂಗ ಬಂಧನದಲ್ಲಿ ಇರುವ ಬಾಲಿವುಡ್ ಚಿತ್ರಗಳ ಸಹ ನಿರ್ದೇಶಕರೊಬ್ಬರು ಅಪರಾಧಿ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದ್ದು, ಆಗಸ್ಟ್ 2 ರಂದು ಶಿಕ್ಷೆಯ ಪ್ರಮಾಣ ಮತ್ತು ಅವಧಿ ಪ್ರಕಟಿಸಲಿದೆ. ಬಾಲಿವುಡ್ ನ ಯಶಸ್ವಿ ಸಿನಿಮಾ ‘ಪೀಪ್ಲಿ ಲೈವ್’ ಚಿತ್ರದ ಸಹನಿರ್ದೇಶಕ ಮಹಮ್ಮದ್ ಫಾರೂಕಿ ಅವರು, ಕಳೆದ ವರ್ಷ ಮಾರ್ಚ್ 28ರಂದು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದರು.
ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿನಿಯಾಗಿದ್ದ ಯುವತಿ, ಮಾಹಿತಿ ಸಂಗ್ರಹಣೆ ಉದ್ದೇಶದಿಂದ ನವದೆಹಲಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಹಮ್ಮದ್ ಫಾರೂಕಿ ಅತ್ಯಾಚಾರ ಎಸಗಿದ್ದಾರೆ ಎಂದು ಆಕೆ ದೂರು ನೀಡಿದ್ದಳು.
ನಂತರದಲ್ಲಿ ಪ್ರಕರಣ ದಾಖಲಾಗಿ, ಕೋರ್ಟ್ ನಲ್ಲಿ ವಿಚಾರಣೆ ನಡೆದಿದ್ದು, ಮಹಮ್ಮದ್ ಫಾರೂಕಿ ತಮ್ಮಿಂದ ಆದ ತಪ್ಪಿಗೆ ಕ್ಷಮೆಯಾಚಿಸಿದ್ದರು. ಆದರೆ, ವಿದ್ಯಾರ್ಥಿನಿ ದೂರು ವಾಪಸ್ ಪಡೆದಿರಲಿಲ್ಲ. ಫಾರೂಕ್ ಅಪರಾಧಿ ಎಂದು ತೀರ್ಪು ನೀಡಿರುವ ನ್ಯಾಯಾಲಯ, ಆಗಸ್ಟ್ 2 ರಂದು ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ ಎಂದು ಹೇಳಲಾಗಿದೆ.