ಮಹಿಳೆಯರಿಗೆ ಸಂಬಂಧಿಸಿದಂತೆ ಕಠಿಣ ಕಾನೂನುಗಳಿರುವ ಸೌದಿ ಅರೇಬಿಯಾದಲ್ಲಿ ಈಗ ಮತ್ತೊಂದು ಕಾನೂನು ಜಾರಿಯಾಗಲಿದೆ. ವಿವಾಹಿತ ಮಹಿಳೆಯರು ತಮ್ಮ ಪತಿಯ ಅನುಮತಿಯಿಲ್ಲದೇ ಕದ್ದು ಮುಚ್ಚಿ ಅವರ ಫೋನ್ ಚೆಕ್ ಮಾಡಿದ್ರೆ ಅಂತವರಿಗೆ ಜೈಲು ಶಿಕ್ಷೆ ಜೊತೆಗೆ ಛಡಿ ಏಟು ಬೀಳಲಿದೆ.
ಸೌದಿ ಅರೇಬಿಯಾದಲ್ಲಿ ಈಗಾಗಲೇ ಮಹಿಳೆಯರು ಕಾರು ಚಲಾಯಿಸುವಂತಿಲ್ಲ, ಒಬ್ಬರೇ ಸಾರ್ವಜನಿಕ ಸ್ಥಳಗಳಿಗೆ ಹೋಗುವಂತಿಲ್ಲವೆಂಬ ಕಾನೂನು ಜಾರಿಯಲ್ಲಿದ್ದು, ಈಗ ಮತ್ತೊಂದು ಕಾನೂನು ಜಾರಿಯಾಗುತ್ತಿದೆ.
ಇಂತಹ ಕಾನೂನು ಜಾರಿಗೊಳಿಸಲು ಮುಂದಾಗಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿರೋಧವೂ ವ್ಯಕ್ತವಾಗಿದೆ. ಆದರೆ ಮತ್ತೊಬ್ಬರ ಮೊಬೈಲ್ ನ್ನು ಅನುಮತಿಯಿಲ್ಲದೆ ಪರಿಶೀಲಿಸಿದರೆ ಅದು ಅವರ ಖಾಸಗಿತನಕ್ಕೆ ಧಕ್ಕೆ ತಂದಂತಾಗುತ್ತದೆ ಎಂದು ಜಾರಿಗೆ ಬರಲಿರುವ ಹೊಸ ಕಾನೂನನ್ನು ಸಮರ್ಥಿಸಿಕೊಳ್ಳಲಾಗಿದೆ.