ಕೋಲ್ಕತ್ತಾ: ಖ್ಯಾತ ಲೇಖಕಿ ಹಾಗೂ ಸಮಾಜ ಕಾರ್ಯಕರ್ತೆಯಾಗಿದ್ದ ಮಹಾಶ್ವೇತದೇವಿ ಗುರುವಾರ 3.16 ಕ್ಕೆ ಕೊನೆಯುಸಿರೆಳೆದಿದ್ದಾರೆ.
ಕೋಲ್ಕತ್ತಾದ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಇವರಿಗೆ 90 ವರ್ಷ ವಯಸ್ಸಾಗಿತ್ತು. ಇವರು ಹೃದಯ ಸ್ತಂಭನ ಮತ್ತು ಬಹು ಅಂಗಗಳ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ.
ಮಹಾಶ್ವೇತಾದೇವಿ ಅವರಿಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ, ಜ್ಞಾನಪೀಠ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿತ್ತು. ಮಹಾಶ್ವೇತಾದೇವಿ 17ನೇ ವರ್ಷದಲ್ಲೇ ಬಂಗಾಳದ ಬರಗಾಲ ಪರಿಸ್ಥಿತಿ ಕಾರ್ಯಕ್ಕೆ ದುಡಿದು ಎಲ್ಲರಿಂದ ಮೆಚ್ಚುಗೆ ಗಳಿಸಿದ್ದರು.