ಲೋಕಸಭೆಯಲ್ಲಿಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮಾತನಾಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಯುವನಾಯಕ ವಾಗ್ದಾಳಿ ನಡೆಸಿದ್ದಾರೆ. ಹಣದುಬ್ಬರ, ದ್ವಿದಳ ಧಾನ್ಯಗಳ ಬೆಲೆ ಏರಿಕೆ ಸೇರಿದಂತೆ ಅನೇಕ ವಿಷಯಗಳನ್ನು ಪ್ರಸ್ತಾಪಿಸಿದ ರಾಹುಲ್, ಮೋದಿ ಸರ್ಕಾರದ ವೈಫಲ್ಯಗಳ ಬಗ್ಗೆ ಲೋಕಸಭೆಯಲ್ಲಿ ಕಿಡಿ ಕಾರಿದ್ದಾರೆ.
‘ಮೇಕ್ ಇನ್ ಇಂಡಿಯಾ’ ಅಡಿ ಮೋದಿ ಸರ್ಕಾರ ಯಾವೊಬ್ಬ ವ್ಯಕ್ತಿಗೂ ಉದ್ಯೋಗ ನೀಡಿಲ್ಲ ಎಂದು ರಾಹುಲ್ ಆರೋಪಿಸಿದ್ದಾರೆ. ಮೋದಿ ಪೊಳ್ಳು ಭರವಸೆಗಳನ್ನು ನೀಡ್ತಾರೆ. ಹಣದುಬ್ಬರ ಯಾವಾಗ ಕೆಳಗಿಳಿಯಲಿದೆ ಎನ್ನುವ ಬಗ್ಗೆ ಒಂದು ದಿನಾಂಕ ನಿಗದಿ ಮಾಡಿ ಎಂದಿದ್ದಾರೆ ರಾಹುಲ್.
ಮೋದಿ ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳಿಗೆ ಹಣ ನೀಡಿದ್ದಾರೆ. ಆದ್ರೆ ಭಾರತದ ಕೃಷಿಕರಿಗೆ ಎಷ್ಟು ಹಣ ನೀಡಿದ್ದಾರೆಂದು ಪ್ರಶ್ನಿಸಿದ್ದಾರೆ. ಮೋದಿ ನನ್ನನ್ನು ಪ್ರಧಾನಮಂತ್ರಿಯಲ್ಲ, ಕಾವಲುಗಾರನನ್ನಾಗಿ ಮಾಡಿ ಎನ್ನುತ್ತಿದ್ದರು. ಆದ್ರೀಗ ಕಾವಲುಗಾರನ ಮೂಗಿನ ಕೆಳಗೆ ಕಳ್ಳತನವಾಗ್ತಾ ಇದೆ. ಅದು ಮೋದಿಯವರಿಗೆ ತಿಳಿಯುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.