ಪತ್ನಿಯನ್ನು ಖುಷಿಪಡಿಸಲು ಗಂಡನಾದವನು ಏನೆಲ್ಲ ಮಾಡ್ತಾನೆ. ಆದ್ರೆ ಆ ವ್ಯಕ್ತಿ ಮಾಡಿದ ಕೆಲಸವನ್ನು ಯಾರೂ ಮಾಡಲು ಸಾಧ್ಯವಿಲ್ಲ. ತನ್ನ ಪತ್ನಿಗಾಗಿ ಒಂದು ವರ್ಷದ ತಿಂಡಿ ಮಾಡಿಟ್ಟಿದ್ದಾನೆ ಆ ವ್ಯಕ್ತಿ. ಅಂದ್ರೆ ಆಕೆ ಒಂದು ವರ್ಷ ಅಡುಗೆ ಕೆಲಸ ಮಾಡುವ ಅಗತ್ಯವೇ ಇಲ್ಲ. ಆತ ಯಾರು? ಯಾಕೆ ಮಾಡಿದ ಗೊತ್ತಾ?
ಚೀನಾದ ಝಾವೋ ಮಾಯ್ ಶಿಕ್ಷಕಿ. ಆಕೆ ಜಗತ್ತಿನ ಅತ್ಯಂತ ಅದೃಷ್ಟದ ಪತ್ನಿ ಎಂದ್ರೆ ತಪ್ಪಾಗಲಾರದು. ಯಾಕೆಂದ್ರೆ ಆಕೆ ಪತಿ ಯಾರೂ ಮಾಡದ ಕೆಲಸ ಮಾಡಿದ್ದಾನೆ. ಝಾವೋ ಮಾಯ್ ಪತಿ ಸೈನಿಕ. 27 ವರ್ಷದ Yin Yunfeng ಸೈನ್ಯದಲ್ಲಿದ್ದಾನೆ. ವರ್ಷಕ್ಕೊಮ್ಮೆ ಹೆಂಡತಿ ಭೇಟಿಗೆ ಬರ್ತಾನೆ Yin Yunfeng. ಆದ್ರೆ ಈ ವೇಳೆ ಗಂಡನ ಜೊತೆ ಸಮಯ ಕಳೆಯುವುದಿರಲಿ, ಅಡುಗೆ ಮಾಡಲೂ ಸಮಯವಿರುವುದಿಲ್ಲ. ಇದನ್ನು ತಿಳಿದಿದ್ದ ಪತಿ Yin Yunfeng ಹೆಂಡತಿಗೆ ಅಡುಗೆ ಮಾಡಲು ನಿರ್ಧರಿಸಿದ್ದಾನೆ,
ಪತ್ನಿ ಶಾಲೆಗೆ ಹೋದ ಬಳಿಕ ಸಾವಿರದ ನೂರಾ ಐವತ್ತಕ್ಕೂ ಹೆಚ್ಚು ಆಹಾರವನ್ನು ಸಿದ್ಧಪಡಿಸಿದ್ದಾನೆ. ಒಂದು ವರ್ಷದವರೆಗಿಟ್ಟರೂ ಹಾಳಾಗದಂತಹ ಆಹಾರ ರೆಡಿ ಮಾಡಿದ್ದಾನೆ. ಪತ್ನಿಯ ಇಷ್ಟವನ್ನು ಗಮನದಲ್ಲಿಟ್ಟುಕೊಂಡೇ ಆಹಾರ ಸಿದ್ಧಪಡಿಸಿದ್ದಾನೆ Yin Yunfeng. ಇಷ್ಟೇ ಅಲ್ಲ ಆಹಾರವನ್ನು ಎಲ್ಲ ರೂಮಿನಲ್ಲೂ ಇಟ್ಟಿದ್ದಾನೆ. ಆಕೆಗೆ ಹಸಿವಾದ ತಕ್ಷಣ ಆಹಾರ ಸಿಗಬೇಕೆನ್ನುವ ಕಾರಣಕ್ಕೆ ಹೀಗೆ ಮಾಡಿದ್ದಾನೆ. ಇದರ ಜೊತೆಗೆ ಪ್ರೀತಿಯ ಪತ್ರವನ್ನೂ ಇಟ್ಟಿದ್ದಾನೆ Yin Yunfeng.