ಸೂಪರ್ ಸ್ಟಾರ್ ರಜನಿಕಾಂತ್ ಅವರ ‘ಕಬಾಲಿ’ ಚಿತ್ರ ಬಿಡುಗಡೆಯಾದ ಬಳಿಕ ಗಳಿಕೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಬಿಡುಗಡೆಯಾದ 4 ದಿನಗಳಲ್ಲೇ ಈ ಚಿತ್ರ 400 ಕೋಟಿ ರೂ. ಗಳಿಕೆ ಮಾಡಿದೆ ಎಂದು ಹೇಳಲಾಗಿದೆ.
ಸಾಮಾಜಿಕ ಜಾಲ ತಾಣದಲ್ಲಿ ರಜನಿಕಾಂತ್ ಅವರಿಗೆ ಭಾರಿ ಅಭಿಮಾನಿಗಳಿದ್ದು, ಟ್ವಿಟ್ಟರ್ ನಲ್ಲಿ ಸುಮಾರು 3 ಮಿಲಿಯನ್ ಮಂದಿ ಫಾಲೋವರ್ಸ್ ಗಳನ್ನು ಅವರು ಹೊಂದಿದ್ದಾರೆ. ಆದರೆ ರಜನಿಕಾಂತ್ ಫಾಲೋ ಮಾಡುವುದು ಎಷ್ಟು ಮಂದಿಯನ್ನು ಗೊತ್ತಾ? ಮುಂದೆ ಓದಿ.
ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ರಜನಿಕಾಂತ್ ಅವರು ಕೇವಲ 19 ಮಂದಿಯನ್ನು ಫಾಲೋ ಮಾಡುತ್ತಿದ್ದು, ಈ ಪೈಕಿ ಏಕೈಕ ರಾಜಕಾರಣಿ ಎಂದರೆ ಅದು ಪ್ರಧಾನಿ ನರೇಂದ್ರ ಮೋದಿಯವರು ಮಾತ್ರ. ಜೊತೆಗೆ ಖ್ಯಾತ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರನ್ನೂ ರಜನಿಕಾಂತ್ ಫಾಲೋ ಮಾಡುತ್ತಾರೆ.