ಮೈದಾನದಲ್ಲಿ ಅಬ್ಬರಿಸುವ ವಿರಾಟ್ ಕೊಹ್ಲಿ ಅಭಿಮಾನಿಗಳ ಸಂಖ್ಯೆ ದಿನ ದಿನಕ್ಕೂ ಏರ್ತಾ ಇದೆ. ನಮ್ಮ ನೆಚ್ಚಿನ ಆಟಗಾರ ಕ್ರಿಕೆಟ್ ಬಿಟ್ಟು ಇನ್ನೇನೂ ಮಾಡ್ತಾರೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳದ್ದು. ಅಭಿಮಾನಿಗಳ ಆಸೆಯನ್ನು ಅರಿತಿರುವ ಕೊಹ್ಲಿ ಅವರಿಗೆ ಬೇಕಾದ್ದನ್ನೇ ನೀಡ್ತಿದ್ದಾರೆ.
ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸದ್ಯ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದಾರೆ. ವೆಸ್ಟ್ ಇಂಡೀಸ್ ನಲ್ಲಿರುವ ಕೊಹ್ಲಿ ಸಮಯ ಸಿಕ್ಕಾಗೆಲ್ಲ ತನ್ನ ಟೀಂ ಜೊತೆ ಸುಂದರ ಬೀಚ್ ಗಳಿಗೆ ತೆರಳಿ ಎಂಜಾಯ್ ಮಾಡ್ತಿದ್ದಾರೆ. ಅಷ್ಟೇ ಅಲ್ಲ ಆ ಸುಂದರ ಕ್ಷಣಗಳ ಫೋಟೋಗಳನ್ನು ಅಭಿಮಾನಿಗಳಿಗಾಗಿ ಸಾಮಾಜಿಕ ಜಾಲತಾಣಗಳಿಗೆ ಹರಿ ಬಿಡ್ತಿದ್ದಾರೆ.
ಈಗ ಅಭಿಮಾನಿಗಳಿಗಾಗಿ ಇನ್ನೊಂದು ವಿಡಿಯೋ ಹರಿಬಿಟ್ಟಿದ್ದಾರೆ ಕೊಹ್ಲಿ. ಅದ್ರಲ್ಲಿ ವೇಟ್ ಲಿಫ್ಟಿಂಗ್ ಮಾಡ್ತಿರುವ ವಿರಾಟ್ ಸಿಕ್ಕಾಪಟ್ಟೆ ಬೆವರಿಳಿಸಿದ್ದಾರೆ. ಬ್ಯಾಟ್ ಹಿಡಿದು ಮೈದಾನದಲ್ಲಿ ಮಿಂಚುವ ಕೊಹ್ಲಿ ಯಾವುದರಲ್ಲೂ ಕಮ್ಮಿ ಇಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು.