ಕೆ.ಎಸ್.ಆರ್.ಟಿ.ಸಿ,ಬಿಎಂಟಿಸಿ, ವಾಯುವ್ಯ ಹಾಗೂ ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಮುಷ್ಕರ ನಾಲ್ಕನೇ ದಿನವೂ ಮುಂದುವರೆದಿದೆ. ಸಾವಿರಾರು ಪ್ರಯಾಣಿಕರು ಪರದಾಡುವಂತಾಗಿದೆ. ಈ ನಡುವೆ ರಾಜಧಾನಿ ಬೆಂಗಳೂರಿನಲ್ಲಿ ನಿಧಾನವಾಗಿ ಬಸ್ ಸಂಚಾರ ಆರಂಭವಾಗ್ತಿದೆ.
ಈಗಾಗಲೇ ನಾಲ್ಕು ಬಸ್ ಗಳು ಸಂಚಾರ ಶುರುಮಾಡಿವೆ. ಮೆಜೆಸ್ಟಿಕ್ ನಿಂದ ಮೂರು, ಶಿವಾಜಿನಗರದಿಂದ ಒಂದು ಹಾಗೂ ಶಾಂತಿನಗರದಿಂದ ಮೂರು ಬಸ್ ಗಳು ಸಂಚಾರ ಶುರುಮಾಡಿವೆ. ಹಿರಿಯ ಚಾಲಕರು ಬಸ್ ಸಂಚಾರ ಶುರುಮಾಡಿದ್ದಾರೆ. ಖಾಸಗಿ ಬಸ್ ಚಾಲಕರು ಬಿಎಂಟಿಸಿ ಬಸ್ ಚಲಾಯಿಸುತ್ತಿದ್ದಾರೆ ಎನ್ನಲಾಗ್ತಿದೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಸ್ ಚಲಾಯಿಸಲಾಗ್ತಾ ಇದ್ದು, ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ. ಪ್ರಯಾಣಿಕರನ್ನು ಉಚಿತವಾಗಿ ಕರೆದೊಯ್ಯಲಾಗಿದೆ.
ಈ ನಡುವೆ ಸರ್ಕಾರಿ ಬಸ್ ಮುಷ್ಕರದ ಲಾಭವನ್ನು ಖಾಸಗಿ ವಾಹನ ಹಾಗೂ ಆಟೋಗಳು ಪಡೆಯುತ್ತಿವೆ. ದುಪ್ಪಟ್ಟು ಹಣ ಕೀಳ್ತಾ ಇವೆ. ಹಾಗಾಗಿ ಆದಷ್ಟು ಬೇಗ ಸಂಧಾನ ಮಾತುಕತೆ ನಡೆಸಿ ಪ್ರಯಾಣಿಕರ ಸಮಸ್ಯೆಗೆ ಸ್ಪಂದಿಸಬೇಕೆಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.