ಬೀಜಿಂಗ್: ಫ್ಯಾಷನ್ ಈಗಿನ ಬಹುತೇಕ ಯುವಕರ ಟ್ರೆಂಡ್. ಮಾರುಕಟ್ಟೆಗೆ ಬರುವ ಹೊಸ ಸ್ಟೈಲ್ ಬಟ್ಟೆ ಧರಿಸುವುದು, ಗೆಳೆಯರ ಗುಂಪಿನಲ್ಲಿ ಮಿಂಚುವುದು, ಹೆಚ್ಚಿನ ಯುವಕ, ಯುವತಿಯರ ಬಯಕೆಯಾಗಿದೆ. ಈಗಂತೂ ಯುವಕರು ಬರ್ಮುಡಾದಲ್ಲೇ ಎಲ್ಲೆಲ್ಲೋ ತಿರುಗಾಡುತ್ತಾರೆ.
ಅಂತಹ ಚಡ್ಡಿಯ ಸ್ವಾರಸ್ಯಕರ ಘಟನೆಯೊಂದರ ವರದಿ ಇಲ್ಲಿದೆ ನೋಡಿ. ಬಸ್ ನಲ್ಲಿ ಪ್ರಯಾಣಿಕರ ಎದುರಿನಲ್ಲೇ ಯುವತಿಯೊಬ್ಬಳು ಯುವಕನ ಬರ್ಮುಡಾ ಕೆಳಗೆಳೆದ ಘಟನೆ ಚೀನಾದ ವು ಶಾನ್ ಲು ಎಂಬಲ್ಲಿ ನಡೆದಿದೆ. ಸಿಟಿ ಬಸ್ ನಲ್ಲಿ ಯುವಕನೊಬ್ಬ ನಿಂತಿದ್ದು, ಬಸ್ ಸಡನ್ ಬ್ರೇಕ್ ಹಾಕಿದ್ದರಿಂದ ಅಲ್ಲೇ ನಿಂತು ಮೇಕಪ್ ಮಾಡಿಕೊಳ್ಳುತ್ತಿದ್ದ ಯುವತಿ ಆಯತಪ್ಪಿ ಬಿದ್ದಿದ್ದಾಳೆ. ಹಿಡಿದುಕೊಳ್ಳಲು ಏನೂ ಸಿಗದೇ ಯುವಕನ ಬರ್ಮುಡಾ ಹಿಡಿದೆಳೆದಿದ್ದಾಳೆ.
ಚಡ್ಡಿ ಕೆಳಗಿಳಿದಿದ್ದೇ ತಡ ಗಲಿಬಿಲಿಗೊಂಡ ಯುವಕ ಅದನ್ನು ಮೇಲೇರಿಸಿಕೊಂಡಿದ್ದಾನೆ. ಅಂದಹಾಗೇ ಯುವತಿ ತಮಾಷೆಗೆ ಹೀಗೆ ಮಾಡಿದ್ದಾಳೋ ಅಥವಾ ಬಸ್ ಬ್ರೇಕ್ ಹಾಕಿದ್ದರಿಂದ ಹಾಗೆ ಮಾಡಿದ್ದಾಳೆಯೇ ಎಂಬುದಂತೂ ಗೊತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.