ದೆವ್ವ, ಭೂತಗಳು ಅಸ್ತಿತ್ವದಲ್ಲಿ ಇದೆಯೇ ಇಲ್ಲವೋ ಎಂಬುದರ ಕುರಿತ ಚರ್ಚೆ ಆಗಾಗ ನಡೆಯುತ್ತಲಿರುತ್ತದೆ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಕೆಲ ವಿಡಿಯೋಗಳು ಈ ಕುರಿತು ಇನ್ನಷ್ಟು ಕುತೂಹಲವನ್ನು ಹುಟ್ಟಿಸುತ್ತವೆ.
ಈಗ ಅಂತಹುದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ. ಈ ದೃಶ್ಯಾವಳಿ ಜಪಾನ್ ನ ಮಾಲ್ ವೊಂದರ ಮುಂದೆ ಅಳವಡಿಸಲಾಗಿದ್ದ ಸಿ.ಸಿ. ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕ್ಯಾಬ್ ಗಾಗಿ ಕಾಯುತ್ತಿದ್ದ ವ್ಯಕ್ತಿಯೊಬ್ಬರು ಅದು ಬಂದ ವೇಳೆ ಕ್ಯಾಬ್ ಏರಿ ಹೊರಟಿದ್ದಾರೆ. ಅಚ್ಚರಿಯೆಂಬಂತೆ ಕಪ್ಪು ಬಣ್ಣದ ಆಕೃತಿಯೊಂದು ಅವರನ್ನು ಹಿಂಬಾಲಿಸಿಕೊಂಡು ಬಂದಿರುವುದು ಸಿ.ಸಿ. ಟಿವಿಯಲ್ಲಿ ಸೆರೆಯಾಗಿದೆ.