ಪಾಕಿಸ್ತಾನದ ಮಾಡೆಲ್ ಕ್ವಂಡೇಲ್ ಬಲೋಚ್ ಹತ್ಯೆಗೆ ಸಂಬಂಧಪಟ್ಟಂತೆ ಸೋಮವಾರದಂದು ಮತ್ತಿಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ಈ ಹತ್ಯೆಯಲ್ಲಿ ಅವರುಗಳ ಪಾತ್ರದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.
ಕ್ವಂಡೇಲ್ ಬಲೋಚ್ ಸಹೋದರಿ ಶಹನಾಜ್ ಹಾಗೂ ಸಹೋದರ ಸಂಬಂಧಿ ಹಕ್ ನವಾಜ್ ರನ್ನು ವಶಕ್ಕೆ ಪಡೆದಿರುವ ಪೊಲೀಸರು, ಹತ್ಯೆಯಲ್ಲಿ ಇವರ ಪಾತ್ರವಿರಬಹುದೇ ಎಂದು ವಿಚಾರಣೆ ನಡೆಸುತ್ತಿದ್ದಾರೆ.
ಜುಲೈ 16 ರಂದು ಮುಲ್ತಾನ್ ನಗರದಲ್ಲಿರುವ ಕ್ವಂಡೇಲ್ ಬಲೋಚ್ ಮನೆಯಲ್ಲಿ ಆಕೆಯ ಸಹೋದರ ಮಹಮ್ಮದ್ ವಾಸೀಂ, ಆಕೆಗೆ ಡ್ರಗ್ಸ್ ನೀಡಿ ಬಳಿಕ ಕತ್ತು ಹಿಸುಕಿ ಹತ್ಯೆ ಮಾಡಿದ್ದ. ಈ ಹತ್ಯೆಯನ್ನು ಕುಟುಂಬದ ಗೌರವ ಕಾಪಾಡಲು ತಾನೊಬ್ಬನೇ ಮಾಡಿದ್ದೇನೆಂದು ವಾಸೀಂ ಹೇಳಿಕೆ ನೀಡಿದ್ದರೂ ಈಗ ವಶಕ್ಕೆ ಪಡೆದಿರುವವರು ಅದಕ್ಕೆ ಕುಮ್ಮಕ್ಕು ನೀಡಿರಬಹುದೆಂಬ ಶಂಕೆ ಹೊಂದಿರುವ ಪೊಲೀಸರು, ವಿಚಾರಣೆ ನಡೆಸಿದ್ದಾರೆ.