ಹೆಸರಿನಲ್ಲೇನಿದೆ? ಒಬ್ಬ ವ್ಯಕ್ತಿಯನ್ನು ಗುರುತಿಸಲು ಇರುವಂತಹದ್ದು ಹೆಸರು. ಆದ್ರೆ ಇದೇ ಹೆಸರು ತಮಿಳುನಾಡಿನ ವಿಧಾನಸಭೆಯಲ್ಲಿ ಗದ್ದಲಕ್ಕೆ ಕಾರಣವಾಗಿದೆ. ತಮಿಳುನಾಡು ಸಿಎಂ ಜಯಲಲಿತಾ ಹೆಸರನ್ನು ಸಂಬೋಧಿಸಬಾರದೆಂದು ಸ್ಪೀಕರ್ ಆದೇಶ ನೀಡಿದ್ದಾರೆ.
ವಾಸ್ತವವಾಗಿ ಸೋಮವಾರದಂದು ವಿಧಾಸಭೆ ಕಲಾಪದಲ್ಲಿ ಎಐಎಡಿಎಂಕೆ ಶಾಸಕ ಪಿ ಎಂ ನರಸಿಂಹನ್ ,ಡಿಎಂಕೆ ನಾಯಕ ಕರುಣಾನಿಧಿಯವರ ಹೆಸರು ಹೇಳಿದ್ದಾರೆ. ಇದಕ್ಕೆ ಡಿಎಂಕೆ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿಗಳ ಹೆಸರು ಹೇಳುವುದು ಸರಿಯೇ ಎಂದು ಸ್ಪೀಕರ್ ಅವರನ್ನು ಪ್ರಶ್ನಿಸಿದ್ದಾರೆ. ಮಾಜಿ ಮುಖ್ಯಮಂತ್ರಿಗಳ ಹೆಸರು ಹೇಳಬಹುದೆಂದು ಸ್ಪೀಕರ್ ಉತ್ತರಿಸಿದ್ದಾರೆ.
ಇದಕ್ಕೆ ಡಿಎಂಕೆ ಸದಸ್ಯರು ಮರು ಪ್ರಶ್ನೆ ಹಾಕಿದ್ದಾರೆ. ಹಾಗಾದ್ರೆ ಮುಖ್ಯಮಂತ್ರಿ ಜಯಲಲಿತಾ ಅವರನ್ನು ಹೆಸರು ಹೇಳಿ ಕರೆಯಬಹುದಾ ಎಂದಿದ್ದಾರೆ. ಇದಕ್ಕೆ ನೋ ಎಂದಿದ್ದಾರೆ ಸ್ಪೀಕರ್. ಯಾವುದೇ ಕಾರಣಕ್ಕೂ ಸಿಎಂ ಹೆಸರು ಹೇಳುವಂತಿಲ್ಲ. ಇದು ನನ್ನ ಆದೇಶ ಎಂದಿದ್ದಾರೆ.