ಈಗಾಗಲೇ ಹಲವು ಕಂಪನಿಗಳು ಚಾಲಕ ರಹಿತ ವಾಹನಗಳನ್ನು ತಯಾರಿಸಿವೆ. ಇದೀಗ ಜರ್ಮನಿಯ ವಾಹನ ತಯಾರಿಕಾ ಕಂಪನಿ ಬೆಂಝ್ ಚಾಲಕ ರಹಿತ ಬಸ್ ಅಭಿವೃದ್ಧಿಪಡಿಸಿದೆ.
ಈ ಬಸ್ ಸಧ್ಯಕ್ಕೆ ನೆದರ್ಲೆಂಡಿನಲ್ಲಿ 20 ಕಿ.ಮೀ. ವಿಸ್ತಾರದಲ್ಲಿ ಪರೀಕ್ಷಾರ್ಥವಾಗಿ ಓಡುತ್ತಿದೆ. ಈ ಬಸ್ ಬೆಂಝ್ ನ ಮೂಲ ಕಂಪನಿ ಅಭಿವೃದ್ಧಿಪಡಿಸಿದ ‘ಡೆಲ್ಮೇರ್ ಸಿಟಿ ಪೈಲಟ್ ಟೆಕ್ನಾಲಜಿ’ ಎಂಬ ತಂತ್ರಜ್ಞಾನವನ್ನು ಒಳಗೊಂಡಿದೆ. ಈ ಬಸ್ ನಲ್ಲಿ 10 ಕ್ಯಾಮರಾಗಳಿದ್ದು, ರಾಡಾರ್ ವ್ಯವಸ್ಥೆಯನ್ನು ಹೊಂದಿದೆ. ಇದು ಗಂಟೆಗೆ 70 ಕಿ.ಮೀ. ಸಂಚರಿಸಬಲ್ಲದು.
ಈ ಬಸ್ ನ ಇನ್ನೊಂದು ವಿಶೇಷತೆ ಏನೆಂದರೆ ಇದರ ಹೊರಗಡೆ ಇರುವ ಉದ್ದನೆಯ ಲೈಟ್. ಇದು ಚಾಲಕರಹಿತವಾಗಿ ಸಂಚರಿಸುತ್ತಿದೆಯೇ ಅಥವಾ ಚಾಲಕನ ನೆರವಿನಿಂದ ಚಲಿಸುತ್ತಿದೆಯೇ ಎಂಬುದನ್ನು ತಿಳಿಸುತ್ತದೆ. ಇದರಲ್ಲಿ ಕಡಿಮೆ ದೂರ ಕ್ರಮಿಸುವ ಪ್ರಯಾಣಿಕರು ಮತ್ತು ಹೆಚ್ಚು ದೂರ ಕ್ರಮಿಸುವ ಪ್ರಯಾಣಿಕರು ಬೇರೆ ಬೇರೆ ಕೂರಬಹುದಾಗಿದೆ.