ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 10 ರೂ. ನಾಣ್ಯಗಳ ಚಲಾವಣೆಯನ್ನು ನಿಷೇಧಿಸಿದೆ ಎಂಬ ವದಂತಿ ಸಾರ್ವಜನಿಕರಲ್ಲಿ ಗೊಂದಲಕ್ಕೆ ಕಾರಣವಾದ ಘಟನೆ ಫರೀದಾಬಾದ್ ನಲ್ಲಿ ನಡೆದಿದೆ.
10 ರೂ. ಕಾಯಿನ್ ಗಳನ್ನು ನಿಷೇಧಿಸಲಾಗಿದೆ ಎಂಬ ವದಂತಿ ಹಬ್ಬಿದ ಕಾರಣ ವ್ಯಾಪಾರಸ್ಥರು ಇವುಗಳನ್ನು ಸ್ವೀಕರಿಸಲು ನಿರಾಕರಿಸಿದ್ದು, ಹೀಗಾಗಿ ಹಲವಾರು ಮಂದಿ ಸಾರ್ವಜನಿಕರು ತಾವು ಕೂಡಿಟ್ಟ ಕಾಯಿನ್ ಗಳನ್ನು ಬ್ಯಾಂಕ್ ಗೆ ತೆಗೆದುಕೊಂಡು ಹೋಗಿ ಅವುಗಳನ್ನು ನೋಟುಗಳನ್ನಾಗಿ ಬದಲಾಯಿಸಿಕೊಡುವಂತೆ ದುಂಬಾಲು ಬಿದ್ದಿದ್ದಾರೆ.
10 ರೂ. ಕಾಯಿನ್ ನಿಷೇಧಿಸಲಾಗಿಲ್ಲ. ಚಲಾವಣೆಯಲ್ಲಿರುವ ಅದನ್ನು ಸ್ವೀಕರಿಸಲು ಯಾರಾದರೂ ನಿರಾಕರಿಸಿದರೆ ಅಪರಾಧವಾಗುತ್ತದೆ ಎಂದು ಬ್ಯಾಂಕ್ ಸಿಬ್ಬಂದಿ ಮನವರಿಕೆ ಮಾಡಿಕೊಡುವಷ್ಟರಲ್ಲಿ ಸಾಕು ಸಾಕಾಗಿ ಹೋಗಿದ್ದಾರೆ.