ಮಧ್ಯ ಪ್ರದೇಶದ ಗ್ವಾಲಿಯರ್ ನಲ್ಲಿ ಬೋರ್ ವೆಲ್ ಒಳಗೆ ಬಿದ್ದಿರುವ ಮೂರು ವರ್ಷದ ಬಾಲಕನನ್ನು ರಕ್ಷಿಸಲು ತೀವ್ರ ಕಾರ್ಯಾಚರಣೆ ನಡೆದಿರುವ ಮಧ್ಯೆ ಬಾಲಕನ ಪಕ್ಕದಲ್ಲೇ ಹಾವು ಇರುವ ದೃಶ್ಯ ಕಂಡು ಬಂದಿದ್ದು, ಆತಂಕ ಮೂಡಿಸಿದೆ.
ಬಾಲಕ ಸುಮಾರು 30 ರಿಂದ 35 ಅಡಿ ಆಳದಲ್ಲಿ ಸಿಲುಕಿದ್ದು, ಆತನ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು ಕ್ಯಾಮರಾ ಇಳಿ ಬಿಟ್ಟ ವೇಳೆ ಅದರಲ್ಲಿ ಹಾವೂ ಸಹ ಇರುವುದು ಕಂಡು ಬಂದಿದೆ. ಬಾಲಕನ ರಕ್ಷಣೆಗಾಗಿ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆದಿದೆ.
ಈ ಬೋರ್ ವೆಲ್ ಗೆ ಸಮಾನಾಂತರವಾಗಿ ಮತ್ತೊಂದು ಗುಂಡಿ ತೆಗೆಯಲಾಗುತ್ತಿದ್ದು, ಬಳಿಕ ಬಾಲಕನ ಬಳಿ ತಲುಪುವ ಇರಾದೆಯನ್ನು ಕಾರ್ಯಾಚರಣೆ ಪಡೆ ಹೊಂದಿದೆ. ಬಾಲಕನ ಸುರಕ್ಷಿತ ರಕ್ಷಣೆಗೆ ಜನರು ಪ್ರಾರ್ಥಿಸುತ್ತಿದ್ದು, ಈಗ ಹಾವು ಕಂಡು ಬಂದಿರುವುದರಿಂದ ಆತಂಕ ಹೆಚ್ಚಿಸಿದೆ.