ಯಾವುದೇ ದೇಶದಲ್ಲಿ ಕಾನೂನು, ಜೈಲುಗಳಿರುವುದು ಅಪರಾಧಿಗಳ ಮನಃಪರಿವರ್ತನೆಗೇ ಹೊರತು ಅವರನ್ನು ಸಾವಿನ ಕೂಪಕ್ಕೆ ತಳ್ಳುವುದಕ್ಕಲ್ಲ. ಕೆಲವು ಜೈಲಿನಲ್ಲಿ ಕೈದಿಗಳನ್ನು, ಅವರು ಮನುಷ್ಯರೇ ಅಲ್ಲವೇನೋ ಎಂಬಂತೆ ಹಿಂಸಿಸುತ್ತಾರೆ. ಅಂತಹ ಕೆಲವು ಜೈಲುಗಳು ಹಾಗೂ ಅದರ ಅಮಾನವೀಯ ಕೃತ್ಯ ಇಲ್ಲಿದೆ ನೋಡಿ.
ಬ್ಯಾಂಗ್ ವ್ಯಾಂಗ್ ಜೈಲು, ಥೈಲ್ಯಾಂಡ್: ಥೈಲ್ಯಾಂಡಿನ ಈ ಜೈಲು ಬ್ಯಾಂಕಾಕಿನ ಹಿಲ್ಟನ್ ಎಂದೇ ಪರಿಚಿತ. ಈ ಜೈಲಿನಲ್ಲಿ ಕೈದಿಗಳನ್ನು ಕಬ್ಬಿಣದ ಸಂಕೋಲೆಗಳಿಂದ ಕಟ್ಟಿಡುತ್ತಾರೆ. ಕೈದಿಗಳಿಗೆ ಪ್ರಾಣಾಂತಕ ನೋವಾಗುವ ಇಂಜೆಕ್ಷನ್ ಕೊಡುತ್ತಾರೆ. ಇಂಜೆಕ್ಷನ್ ಕೊಡುವ ಎರಡು ಗಂಟೆ ಮೊದಲು ಕೈದಿಗೆ ವಿಷಯ ತಿಳಿಸುತ್ತಾರಂತೆ.
ಲಾ ಸಾಬಾನೆಟಾ, ವೆನುಜ್ವೆಲಾ: ಈ ಜೈಲು ತನ್ನ ಕ್ರೂರತೆಯಿಂದಲೇ ಕುಖ್ಯಾತಿ ಪಡೆದಿದೆ. ಇಲ್ಲಿ ದಿನವೂ ಕೈದಿಗಳ ಚಿತ್ರಹಿಂಸೆ ನಡೆಯುತ್ತದೆ. ಇಲ್ಲಿನ ಜೈಲು ವಾಸಿಗಳಿಗೆ ಸರಿಯಾದ ಊಟ, ಚಿಕಿತ್ಸೆ, ಬಟ್ಟೆ ಇವ್ಯಾವುದೂ ದೊರೆಯುವುದಿಲ್ಲ.
ಲಾ ಸಂತೆ, ಫ್ರಾನ್ಸ್: ಇದು ಫ್ರಾನ್ಸ್ ನ ರಾಜಧಾನಿ ಪ್ಯಾರಿಸ್ ನಿಂದ ಸ್ವಲ್ಪ ದೂರದಲ್ಲಿದೆ. ಈ ಜೈಲು ‘ಆತ್ಮಹತ್ಯೆಯ ಜೈಲು’ ಎಂದೇ ಹೆಸರು ಪಡೆದಿದೆ. 1867ರಲ್ಲಿ ಆರಂಭವಾದ ಈ ಜೈಲಿನಲ್ಲಿ ಅನೇಕ ಆತ್ಮಹತ್ಯೆಯ ಪ್ರಕರಣಗಳು ನಡೆಯುತ್ತವೆ. ಕೆಲವರು ಇಲ್ಲಿ ಆತ್ಮಗಳು ಇವೆಯೆಂದು ಕೂಡ ಹೇಳುತ್ತಾರೆ. 1999 ರಲ್ಲಿ ಇಲ್ಲಿ 124 ಕೈದಿಗಳ ಸಾಮೂಹಿಕ ಆತ್ಮಹತ್ಯೆ ನಡೆಯಿತು.
ಡಾಯಾರಬಾಕಿರ್, ಟರ್ಕಿ: ಈ ಜೈಲಿನಲ್ಲೂ ಕೈದಿಗಳ ಜೊತೆ ಅಮಾನವೀಯವಾಗಿ ನಡೆದುಕೊಳ್ಳಲಾಗುತ್ತದೆ. ಅಪರಾಧಿಗಳಿಗೆ ನಾಯಿಯಿಂದ ಕಚ್ಚಿಸುವುದು ಮತ್ತು ಅವರ ಗುಪ್ತಾಂಗಗಳನ್ನು ಸಿಗರೇಟಿನಿಂದ ಸುಡುವುದು ಮುಂತಾದ ಹೇಯ ಕೃತ್ಯಗಳನ್ನು ಮಾಡಲಾಗುತ್ತದೆ.
ಟಡ್ಮೋರ್, ಸಿರಿಯಾ: ಈ ಜೈಲಿನಲ್ಲಿ ಕೈದಿಗಳನ್ನು ಕೊಂದು ಅವರನ್ನು ತಿನ್ನುವಂತೆ ಇನ್ನೊಬ್ಬ ಕೈದಿಗೆ ಹೇಳುವುದು ಸರ್ವೇ ಸಾಮಾನ್ಯ. 1980 ರಲ್ಲಿ ರಾಷ್ಟ್ರಾಧ್ಯಕ್ಷನ ಆದೇಶದ ಮೇರೆಗೆ ಸುಮಾರು 2400 ಕೈದಿಗಳನ್ನು ಒಮ್ಮೆಲೇ ಸಾಯಿಸಲಾಯಿತು.