Quantcast
Channel: Latest News | Kannada Dunia | Kannada News | Karnataka News | India News
Viewing all articles
Browse latest Browse all 103032

ನಾಪತ್ತೆಯಾದ ವಿಮಾನಕ್ಕಾಗಿ ನಡೆದಿದೆ ಹುಡುಕಾಟ

$
0
0
ನಾಪತ್ತೆಯಾದ ವಿಮಾನಕ್ಕಾಗಿ ನಡೆದಿದೆ ಹುಡುಕಾಟ

ಚೆನ್ನೈನ ತಾಂಬರಮ್ ಏರ್ ಬೇಸ್ ನಿಂದ ಅಂಡಮಾನ್ ನ ಪೋರ್ಟ್ ಬ್ಲೇರ್ ಗೆ ಹೊರಟಿದ್ದ ವಾಯುಪಡೆಗೆ ಸೇರಿದ್ದ AN-32 ವಿಮಾನ, ಇಂದು ಬೆಳಿಗ್ಗೆ ಚೆನ್ನೈನಿಂದ 150 ನಾಟಿಕಲ್ ಮೈಲು ದೂರದಲ್ಲಿ ನಾಪತ್ತೆಯಾಗಿದ್ದು, ತೀವ್ರ ಹುಡುಕಾಟ ನಡೆದಿದೆ.

6 ಮಂದಿ ಸಿಬ್ಬಂದಿ ಸೇರಿದಂತೆ ಒಟ್ಟು 29 ಮಂದಿ ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದು, ಬಂಗಾಳ ಕೊಲ್ಲಿಯಲ್ಲಿ ವಿಮಾನ ಪತನಗೊಂಡಿರಬಹುದೆಂಬ ಶಂಕೆಯ ಹಿನ್ನಲೆಯಲ್ಲಿ ನೌಕಾದಳದ ನಾಲ್ಕು ಹಡಗುಗಳು ಹಾಗೂ ವಾಯುಪಡೆಯ ವಿಮಾನಗಳು ಹುಡುಕಾಟ ನಡೆಸಿವೆ.

ಬೆಳಿಗ್ಗೆ 7-30 ಕ್ಕೆ ತಾಂಬರಮ್ ಏರ್ ಬೇಸ್ ನಿಂದ ಟೇಕಾಫ್ ಆದ ಈ ವಿಮಾನ, 8-15 ರ ಸುಮಾರಿಗೆ ರೆಡಾರ್ ಸಂಪರ್ಕ ಕಳೆದುಕೊಂಡಿದೆ ಎನ್ನಲಾಗಿದ್ದು, ಈಗ ವಿಮಾನದ ಪತ್ತೆಗೆ ಶೋಧ ಕಾರ್ಯ ತೀವ್ರಗೊಂಡಿದೆ.


Viewing all articles
Browse latest Browse all 103032

Trending Articles



<script src="https://jsc.adskeeper.com/r/s/rssing.com.1596347.js" async> </script>